ಉಳ್ಳಾಲ: ಅಪರಿಚಿತ ವಾಹನ ಬುಲೆಟ್ ಗೆ ಡಿಕ್ಕಿ:
ಸೇತುವೆಯಿಂದ ಕೆಳಗಡೆ ಬಿದ್ದು ಸವಾರ ಮೃತ್ಯು

ಉಳ್ಳಾಲ: ಫ್ಲೈ ಓವರ್‌ನಿಂದ ಕೆಳಗೆ ಬಿದ್ದು ಬುಲೆಟ್ ಸವಾರ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಬುಧವಾರ ಸಂಜೆ ವೇಳೆ ನಡೆದಿದೆ.
ಕುಂಪಲ ನಿವಾಸಿ ಸುಬ್ರಹ್ಮಣ್ಯ (50) ಸಾವನ್ನಪ್ಪಿದವರು.
ಮಂಗಳೂರು ಕಡೆಯಿಂದ ಕುಂಪಲ ಕಡೆಗೆ ಬುಲೆಟ್ ವಾಹನದಲ್ಲಿ ಬರುವ ಸಂದರ್ಭ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಬುಲೆಟ್ ಫ್ಲೈಓವರ್ಗೆ ಡಿಕ್ಕಿ ಹೊಡೆದಿದ್ದು, ಸವಾರ ಸೇತುವೆಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.