ಕಾಗಿಣಾ ನದಿಯ ಬ್ರಿಡ್ಜ್ ಕಮ್ ಬ್ಯಾರೇಜನ ಗೇಟ್ ಬಳಿ ಮೃತದೇಹ ಪತ್ತೆ
ಶಹಾಬಾದ: ತಾಲೂಕಿನ ಭಂಕೂರ ವಾಡಾದ ಯುವಕ ಶಶಿಕಾಂತ ಮಾನಸಿಂಗ ಚವ್ಹಾಣ ಶವ ಕಾಗಿಣಾ ನದಿಯ ಬ್ರಿಡ್ಜ್ ಕಮ್ ಬ್ಯಾರೇಜನ ಗೇಟ್ ಬಳಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಶಶಿಕಾಂತ ಮಾನಸಿಂಗ ಚವ್ಹಾಣ ತನ್ನ ಮೂವ್ವರು ಗೆಳೆಯರೊಂದಿಗೆ ಶಂಕರವಾಡಿ ಗ್ರಾಮದ ಕಾಗಿಣಾ ನದಿಯ ಬ್ರಿಡ್ಜ್ ಕಮ್ ಬ್ಯಾರೇಜ್‌ನಲ್ಲಿ ಮೀನು ಹಿಡಿಯಲು ಹೋಗಿದ್ದ. ನಂತರ ಈಜಾಡಿ ಬರುತ್ತೇನೆ ಸ್ವಲ್ಪ ನಿಲ್ಲಿ ಎಂದು ಹೇಳಿ ಬಟ್ಟೆ ಬಿಚ್ಚಿ ನೀರಿಗೆ ಧುಮಿಕಿದ್ದ. ನೀರಿನಲ್ಲಿ ಈಜು ಬಾರದೇ ಮುಳುಗುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ಒದಗಿಸಿದ್ದಾರೆ.




