ಧಮ೯ನಗರ ಮಖಾಂ ಊರೂಸ್: ಮತ ಪ್ರಭಾಷಣಕ್ಕೆ ಚಾಲನೆ
ಮಂಜೇಶ್ವರ: ಇಲ್ಲಿನ ವಕಾ೯ಡಿ ಸಮೀಪದ ಧಮ೯ನಗರ ಮಖಾಂ ಊರೂಸ್ ಪ್ರಯುಕ್ತ ಮತ ಪ್ರಭಾಷಣ ಕಾಯ೯ಕ್ರಮದ ಉಧ್ಘಾಟನೆಯನ್ನು ಬಹು ಸಯ್ಯದ್ ಅತ್ತಾವುಲ್ಲಾ ತಂಞಲ್ ಎಂ ಎ ಉದ್ಯಾವರ ನಿವ೯ಹಿಸಿದರು.ಕಾಯ೯ಕ್ರಮದಲ್ಲಿ ಪೊಯತ್ತಬೈಲ್ ಜಮಾಅತ್ ಅಧ್ಯಕ್ಷರಾದ ಡಿಎಂಎಕೆ ಮುಹಮ್ಮದ್ ರವರು ಅಧ್ಯಕ್ಷತೆ ವಹಿಸಿದ್ದರು.

ಕಾಯ೯ಕ್ರಮದಲ್ಲಿ ದ್ವಜಾರೋಹಣವನ್ನು ಧಮ೯ನಗರ ಊರೂಸ್ ಕಮಿಟಿ ಚೆಯರ್ ಮೆನ್ ಅಬ್ದುಲ್ ರಹಿಮಾನ್ ಹಾಜಿ
ನೇರವೆರಿಸಿದರು.ಸಮುದಾಯದ ಐಕ್ಯತೆ ಕಾಲಘಟ್ಟದ ಅನಿವಾಯ೯ತೆಯಾಗಿದೆಯೆಂದೂ ಸಯ್ಯದ್ ಅತ್ತಾವುಲ್ಲಾ ತಂಞಲ್ ನುಡಿದರು.
ವೇದಿಕೆಯಲ್ಲಿ ಸಯ್ಯದ್ ಸಂಶುದ್ದೀನ್
ತಂಞಲ್ ಗಾಂಧೀನಗರ, ಪೊಯತ್ತಬೈಲ್ ಜಮಾಅತ್ ಮಾಜಿ ಅಧ್ಯಕ್ಷರಾದ ಎನ್ ಅಹಮ್ಮದ್ ಕುಂಞ, ಟಿ ಅಹಮ್ಮದ್ ಕುಂಞ, ಟಿ ಇಸ್ಮಾಯಿಲ್ ಮಾಸ್ಟರ್, ಅಹಮ್ಮದ್ ಕುಂಞ ಓಡಂಗಳ, ಪೊಯತ್ತಬೈಲ್ ಖತೀಬ್ ಅಬ್ದುಲ್ ಜಬ್ಬಾರ್ ಸಖಾಪಿ ಪಾತೂರು, ಧಮ೯ನಗರ ಖತೀಬ್ ಜಾಪರ್ ಸಾದೀಕ್ ಸಅದಿ, ಊರೂಸ್ ಕಮಿಟಿ ಕೋಶಾಧಿಕಾರಿ ಮೂಸಾಮಜೀದ್, ಮಣವಾಠಿ ಬೀವಿ ಶಾಲಾ ಕಮಿಟಿ
ಚಯರ್ಮೇನ್ ಇಬ್ರಾಹಿಂ ಮಾಸ್ತರ್, ಮಾಜಿ ಶಾಲಾ ಚಯರ್ಮೇನ್ ಮುಹಮ್ಮದ್ ಅಲಿ ನೇಶನಲ್ , ಕ್ಯಾಂಪ್ಕೊ ಅಬೂಬಕ್ಕರ್, ಇದ್ದೀನ್ ಕುಂಞ ಹಾಜಿ ತಾಜ್, ಮುಹಮ್ಮದ್ ಕುಂಞ ಪರನೀರ್, ಮೊಯಿದಿನ್ ಕುಟ್ಟಿ ನಿರೋಳಿಕೆ, ಡಾ: ಶಫೀಕ್ ಧಮ೯ನಗರ, ಮೊಯಿದಿನ್ ಕುಂಞ, ಮೂಸಾ ಅಣೆ, ಅಬ್ದುಲ್ ಕರೀಂ, ಮುಸಾ ಡಿಕೆ ಮೊದಲಾದವರು ಉಪಸ್ಥಿತರಿದ್ದರು. ಊರೂಸ್ ಪ್ರಯುಕ್ತ ಫೆ 26 ರವರೆಗೆ ಮತಪ್ರಭಾಷಣ ನಡೆಯಲಿದ್ದು 27 ರಂದು ಹಗಲು ಊರೂಸ್ ಕಾಯ೯ಕ್ರಮ ನಡೆಯಲಿದೆ




