February 3, 2026

ಶಾಲಾಂಗಣದಲ್ಲಿ ತೀವ್ರ ಅವಮಾನ, ಕಿರುಕುಳಗಳನ್ನು ಎದುರಿಸುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರು: ನ್ಯಾಷನಲ್ ವಿಮೆನ್ಸ್ ಫ್ರಂಟ್ ಖಂಡನೆ

0
IMG_20220217_145009.jpg

ಹೈಕೋರ್ಟಿನ ಮಧ್ಯಂತರ ಆದೇಶವು ಕೇವಲ ಕಾಲೇಜಿಗೆ ಸೀಮಿತವೆಂದು ತಿಳಿದೂ ಪ್ರೌಢಶಾಲೆಗಳಲ್ಲಿ ಅದನ್ನು ಹೇರಿ ಮಕ್ಕಳಲ್ಲಿ ಆತಂಕ ಸೃಷ್ಟಿಸುತ್ತಿರುವುದು ಸರಿಯಲ್ಲ. ಪ್ರೌಢಶಾಲೆಗಳಲ್ಲಿ ಹೆಚ್ಚುತ್ತಿರುವ ಕಿರುಕುಳ, ಅವಮಾನಗಳು
ಮುಸ್ಲಿಂ ವಿದ್ಯಾರ್ಥಿನಿಯರು ಮತ್ತು ಶಿಕ್ಷಕಿಯರ ಪಾಲಿಗೆ ಶಾಲಾ ವಾತಾವರಣವನ್ನು
ಅಸುರಕ್ಷಿತವನ್ನಾಗಿಸಿದೆ. ನ್ಯಾಷನಲ್ ವಿಮೆನ್ಸ್ ಫ್ರಂಟ್, ಕರ್ನಾಟಕ ಇದನ್ನು ತೀವ್ರವಾಗಿ ಖಂಡಿಸುತ್ತದೆ.

ಆರೋಗ್ಯಕರ ಸಮಾಜದ ಬುನಾದಿಯಾಗಿರುವ ಶಾಲಾಂಗಣದಲ್ಲಿ ಇಂದು ಧಾರ್ಮಿಕ ಅಸಹಿಷ್ಣುತೆಯು ತಾಂಡವವಾಡುತ್ತಿದ್ದು ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಹಾಗೂ ಸಮಾಜದ ಸಾಮರಸ್ಯಕ್ಕೆ ಕಂಟಕವಾಗಿದೆ.

ಮತ್ತೊಮ್ಮೆ, ರಾಜ್ಯದ ಶಾಂತಿ ಕದಡದಂತೆ ಎಚ್ಚರ ವಹಿಸುತ್ತಾ ಹೈಕೋರ್ಟಿನ ಆದೇಶಕ್ಕೆ ವಿಧೇಯರಾಗಿ ಸಂಬಂಧಪಟ್ಟ ಇಲಾಖೆಯು ತಪ್ಪಿತಸ್ಥರ ವಿರುದ್ಧ ಸ್ವಯಂಪ್ರೇರಿತ ಕಾನೂನುಕ್ರಮ ಕೂಡಲೇ ಜರುಗಿಸಬೇಕೆಂದು ನ್ಯಾಷನಲ್ ವಿಮೆನ್ಸ್ ಫ್ರಂಟ್, ಕರ್ನಾಟಕ ಇದರ ರಾಜ್ಯಾಧ್ಯಕ್ಷೆ ಫರ್ಝಾನಾ ಮುಹಮ್ಮದ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!