ಅಲಪ್ಪುಳ: ಬಿಜೆಪಿ ಕಾರ್ಯಕರ್ತನನ್ನು ಚಾಕುವಿನಿಂದ ಇರಿದು ಹತ್ಯೆ
ಅಲಪ್ಪುಳ: ಹಳೆ ದ್ವೇಷದ ಹಿನ್ನಲೆ ಕೇರಳದ ಅಲಪ್ಪುಳ ಜಿಲ್ಲೆಯ ಹರಿಪಾಡ್‌ನಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ .
ಮೃತರನ್ನು ಹರಿಪಾದ್‌ನ ಕುಮಾರಪುರಂ ಬಳಿಯ ವರ್ಯಂಕೋಡ್ವಿದ ಶರತ್ ಚಂದ್ರನ್(26) ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ 11.30ರ ಸುಮಾರಿಗೆ ಶರತ್ ಚಂದ್ರನ್ ತನ್ನ ಕೆಲವು ಸ್ನೇಹಿತರೊಂದಿಗೆ ದೇವಸ್ಥಾನದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಮರಣೋತ್ತರ ಪರೀಕ್ಷೆ ಮತ್ತು ವಿಚಾರಣೆ ಪ್ರಕ್ರಿಯೆಗಳು ಇನ್ನೂ ಮುಗಿದಿಲ್ಲ ಎಂಬ ಮಾಹಿತಿ ದೊರಕಿದೆ.
ಈ ಹಿಂದೆ ಪುಥೇನ್ಕರಿಯಿಲ್ ದೇವಿ ದೇವಸ್ಥಾನದಲ್ಲಿ ಶರತ್‌ನೊಂದಿಗೆ ವಾಗ್ವಾದ ನಡೆಸಿದ ದುಷ್ಕರ್ಮಿಗಳು, ನಿನ್ನೆ ಆತನಿಗಾಗಿ ದೇವಸ್ಥಾನದ ಬಳಿ ಕಾಯುತ್ತಿದ್ದರು, ಈ ವೇಳೆ ಮತ್ತೆ ಅವರ ಜೊತೆ ಜಗಳ ನಡೆದ ಸಂದರ್ಭದಲ್ಲಿ ಚಂದ್ರನ್‌ಗೆ ಇರಿದಿದ್ದಾರೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆದಾಖಲಿಸಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ
7 ರಿಂದ 8 ಮಂದಿ ದುಷ್ಕರ್ಮಿಗಳ ಪೈಕಿ ಇಬ್ಬರನ್ನು ಗುರುತಿಸಲು ಸಾಧ್ಯವಾಯಿತು ಮತ್ತು ಘಟನೆಯಲ್ಲಿ ಭಾಗಿಯಾಗಿದ್ದ ಇನ್ನೊಬ್ಬ ವ್ಯಕ್ತಿಯೊಂದಿಗೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ




