March 21, 2026

ಬ್ರಿಟೀಷರ ಅಪಾಯ ಅರಿತವರೇ ಹೈದರಾಲಿ, ಟಿಪ್ಪು: ಸಿಂಹಗೆ ಖಾದರ್ ತಿರುಗೇಟು

0
IMG_20220214_214903.jpg

ಬೆಂಗಳೂರು: ನನ್ನನ್ನು ಮುಲ್ಲಾ ಎಂದು ಪ್ರತಾಪ್ ಸಿಂಹ ಕರೆದರೆ ನಾನು ಖುಷಿಪಡುತ್ತೇನೆ. ಏಕೆಂದರೆ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನೂರಾರು ಮುಲ್ಲಾಗಳು ಗಾಂಧೀಜಿಗೆ ಹೆಗಲಾಗಿದ್ದರು. ಹತ್ತಾರು ಮುಲ್ಲಾಗಳು,ಮೌಲ್ವಿಗಳು ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು ಟಿ ಖಾದರ್ ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.

ಈಗ ಇತಿಹಾಸಕ್ಕೆ ಬರೋಣಾ, ಈಗೇನಾದರೂ ಸಾವರ್ಕರ್ ಅವರು ಬದುಕಿದ್ದರೆ ಮೈಸೂರು ರೈಲಿಗೆ ಟಿಪ್ಪು ಎಕ್ಸ್ ಪ್ರೆಸ್ ಎಂದು ಹೆಸರು ಇರಬೇಕು ಎಂಬುದನ್ನು ನನ್ನಂತೆ ಅವರೂ ಪ್ರತಿಪಾದಿಸುತ್ತಿದ್ದರು. “ಈ ದೇಶಕ್ಕೆ ಬ್ರಿಟೀಷರಿಂದ ಅಪಾಯ ಇದೆ ಎಂಬುದನ್ನು ಮೊದಲು ಅರಿತವರೇ ಹೈದರಾಲಿ ಮತ್ತು ಟಿಪ್ಪು” ಎಂದು ಸಾವರ್ಕರ್ ಹೇಳುತ್ತಾರೆ. ( ಪುಸ್ತಕ : ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ 1857- ಲೇಖಕರು : ಸಾವರ್ಕರ್) ಎಂದು ಉದಾಹರಣೆ ಸಮೇತ ತಿರುಗೇಟು ನೀಡಿದ್ದಾರೆ.

ನಾನೇನೋ ಉಲ್ಲಾಳದ ಮುಲ್ಲಾ. ಬುದ್ದಿವಂತ ಸಂಸದರಾಗಿರುವ ಪ್ರತಾಪ್ ಸಿಂಹ ಅವರು ಸಾವರ್ಕರ್ ಅವರನ್ನು ಒಪ್ಪುತ್ತಾರೋ ಇಲ್ಲವೋ ಹೇಳಲಿ ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!