March 21, 2026

ವಿಟ್ಲದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ಬ್ಲಡ್ ಸೈಬೋ ವತಿಯಿಂದ ಬೃಹತ್ ರಕ್ತದಾನ ಶಿಬಿರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ

0
IMG_20220214_212258.jpg

ವಿಟ್ಲ: ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ವಿಟ್ಲದ ಟೌನ್ ಮಸ್ಜಿದ್ ಹತ್ತಿರ ನಡೆಯಿತು.

ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮತ್ತು ಲೇಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಬಾಗಿತ್ವದಲ್ಲಿ ಬ್ಲಡ್ ಸೈಬೋ ಕರ್ನಾಟಕ ಇದರ 265ನೇ ಬೃಹತ್ ರಕ್ತದಾನ ಶಿಬಿರವು ವಿಟ್ಲ ಟೌನ್ ಮಸ್ಜಿದ್ ಸಮೀಪ ನಡೆಯಿತು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಅಮೈ ಮಹಾಲಿಂಗ ನಾಯ್ಕ, ಎಸ್ಸೆಸ್ಸೆಫ್ ಬ್ಲಡ್ ಸೈಬೋ ಕರ್ನಾಟಕ ಇದರ ದ.ಕ ಜಿಲ್ಲೆ (ಈಸ್ಟ್) ಉಸ್ತುವಾರಿ ಗಳಾದ ಅಬೂಬಕ್ಕರ್ ಸಿದ್ದೀಕ್ ಗೂನಡ್ಕ , ವಿಟ್ಲ ಪಟ್ಟಣ ಪಂಚಾಯತ್ ನೂತನ ಸದಸ್ಯರಾಗಿ ಆಯ್ಕೆ ಆದ ವಿಕೆಎಂ ಅಶ್ರಫ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಂ.ಎಸ್ ಮಹಮ್ಮದ್ ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಅಳಿಕೆ ಗ್ರಾಮ ಪಂಚಾಯತ್ ಸದಸ್ಯರಾದ ಪದ್ಮನಾಭ ಪೂಜಾರಿ, ಅಬೂಬಕ್ಕರ್ ಅನಿಲಕಟ್ಟೆ, ಇಬ್ರಾಹಿಂ ಮುಸ್ಲಿಯಾರ್ ಅಳಿಕೆ, ಅರ್.ಕೆ ಅಬ್ದುಲ್ಲಾ ಹಾಜಿ ಸ್ಟೈಲ್ ಪಾರ್ಕ್, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಕಾರ್ಯದರ್ಶಿ ಗಳಾದ ಸಿರಾಜುದ್ದೀನ್ ಸಖಾಫಿ ಕನ್ಯಾನ, ಎಸ್.ವೈ.ಎಸ್ ನಾಯಕರಾದ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು, ಇಬ್ರಾಹಿಂ ಮುಸ್ಲಿಯಾರ್ ಕೊಡಂಗಾಯಿ, ರಹೀಂ ಸಖಾಫಿ ವಿಟ್ಲ, ಉಸ್ಮಾನ್ ಹಾಜಿ ಸೆರ್ಕಳ, ಮುಸ್ತಫಾ ಕೋಡಪದವು, ಮುಸ್ತಫಾ ಕುಂಡಡ್ಕ, SMA ವಿಟ್ಲ ರೀಜನಲ್ ಅಧ್ಯಕ್ಷರಾದ ಹಕೀಂ ಶಾಂತಿನಗರ, ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಸಮಿತಿಯ ಮಾಜಿ ನಾಯಕರಾದ ಸಲೀಂ ಹಾಜಿ ಬೈರಿಕಟ್ಟೆ, ಹಾಜಿ ಅಬ್ದುಲ್ ರಝಾಕ್ ಸಖಾಫಿ ಕೆಲಿಂಜ, ಸಿ. ಎಚ್ ಅಬ್ದುಲ್ ಖಾದರ್ ಕೊಡಂಗಾಯಿ, ರಝಾಕ್ ಪೆಲ್ತಡ್ಕ, ಜಲೀಲ್ ಒಕ್ಕೆತ್ತೂರು ಹಾಗೂ ಕೆಸಿಎಫ್ ನಾಯಕರಾದ ಝಿಯಾದ್ ಮಾಸ್ಟರ್ ಬೈರಿಕಟ್ಟೆ, ಅಶ್ರಫ್ ಅಳಿಕೆ, ವಿ.ಎಂ ಉಮರ್ ಫಾರೂಕ್, ಶಂಸುದ್ದೀನ್ ಬೈರಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಡಿವಿಷನ್ ಅಧ್ಯಕ್ಷರಾದ ವಿಎಂ ಅಬೂಬಕ್ಕರ್ ಹಿಮಮಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು, ಡಿವಿಷನ್ ಪ್ರಧಾನ ಕಾರ್ಯದರ್ಶಿ ಜಹಾಝ್ ಅಳಿಕೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!