May 18, 2026

ಸುಳ್ಯ: ಓಮ್ನಿಕಾರು ಪಲ್ಟಿ : ಮಗು ಸಾವು

0
parking-lot-accidents-what-happens-if-your-insurance-lapses-and-you-have-an-accident-

ಸುಳ್ಯ: ಗುತ್ತಿಗಾರು ಸುಬ್ರಹ್ಮಣ್ಯ ರಸ್ತೆಯಲ್ಲಿ ಚೆಂಬು ಗ್ರಾಮದ ಓಮ್ನಿ ಕಾರೊಂದು ಪಲ್ಟಿಯಾಗಿ ವಾಹನದಲ್ಲಿದ್ದ ಕೆದಂಬಾಡಿ ಯತೀಶ್ ಎಂಬವರ ಒಂದು ವರ್ಷದ ಮಗು ಸರಿತ್ ಮೃತಪಟ್ಟ ದಾರುಣ ಘಟನೆ ಫೆ 14 ರಂದು ಸುಳ್ಯದಿಂದ ವರದಿಯಾಗಿದೆ.


ಅಪಘಾತದ ವೇಳೆ ಓಮ್ನಿಯಲ್ಲಿದ್ದ ಕಬ್ಬಿಣದ ಸರಳೊಂದು ಮಗುವಿನ ಕುತ್ತಿಗೆಗೆ ನುಗ್ಗಿ ತೀವ್ರ ಗಾಯ ಗೊಂಡು ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.ಅಷ್ಟರಲ್ಲಿ ಮಗು ಮೃತ ಪಟ್ಟಿತ್ತು ಎನ್ನಲಾಗಿದೆ.


ಸುಬ್ರಹ್ಮಣ್ಯಕ್ಕೆ ಹೋಗಿ ಹಿಂತಿರುಗುವಾಗ ಈ ಘಟನೆ ನಡೆದಿದ್ದು, ಮಗುವಿನ ಮೃತದೇಹ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!