ಹಿಜಾಬ್ ಪ್ರಕರಣದ ವಿಚಾರಣೆ ನಾಳೆಗೆ ಮುಂದೂಡಿಕೆ
ಬೆಂಗಳೂರು: ಹಿಜಾಬ್ ಪ್ರಕರಣದ ವಿಚಾರಣೆ ಸದಸ್ಯ ಪೀಠ ನಾಳೆ ಮುಂದೂಡಿದೆ.
ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈಕೋರ್ಟ್ ತ್ರಿಸದಸ್ಯ ಪೀಠದಿಂದ ಅರ್ಜಿ ವಿಚಾರಣೆ ನಡೆದಿದ್ದು ಮುಂದಿನ ಅರ್ಜಿ ವಿಚಾರಣೆ ನಾಳೆ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಲಾಗಿದೆ.
ನ್ಯಾಯಮೂರ್ತಿ ರಿತುರಾಜ್ ಅವಾಸ್ಥಿ, ಕಾಜಿ ಜೈಬುನ್ನಿಸಾ ಮೊಹಿಯ್ಯುದ್ದೀನ್, ಕೃಷ್ಣ ದೀಕ್ಷಿತ್ ಅವರ ನ್ಯಾಯಪೀಠದ ಮುಂದೆ ಅರ್ಜಿ ವಿಚಾರಣೆ ನಡೆದಿದೆ.
ಹಲವು ಸಂವಿಧಾನಿಕ ಮತ್ತು ಧಾರ್ಮಿಕ ಅಂಶಗಳು ಒಳಗೊಂಡಿದ್ದರಿಂದ ವಿಚಾರಣೆಯನ್ನು ನ್ಯಾಯಾಲಯ ನಾಳೆ ಮಧ್ಯಾಹ್ನಕ್ಕೆ ಮುಂದೂಡಿದೆ.




