March 21, 2026

ವಿಟ್ಲದಲ್ಲಿ SUZUKI ಪಿ.ಎಸ್ ಮೋಟರ್ಸ್ ಶೋ ರೂಂ ಉದ್ಘಾಟನೆ: ಉದ್ಘಾಟನೆ ಪ್ರಯುಕ್ತ ವಾಹನ ಖರೀದಿಯಲ್ಲಿ ಡಿಸ್ಕೌಂಟ್

0
IMG_20220214_161742.jpg

ವಿಟ್ಲ: ವಿಟ್ಲದ ಮೇಗಿನಪೇಟೆಯ ಬದ್ರಿಯಾ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಗೊಂಡ ಸುಝಿಕಿ ಪಿ.ಎಸ್ ಮೋಟರ್ಸ್ ಶೋ ರೂಂ ಉದ್ಘಾಟನೆಗೊಂಡಿತು.

ಸಯ್ಯದ್ ಅಲಿ ತಂಙಳ್ ಕುಂಬೋಳ್ ಅವರು ನೂತನ ಶೋ ರೂಂ ಅನ್ನು ಉದ್ಘಾಟಿಸಿ, ದುವಾಃ ಆಶೀರ್ವಚನ ನೀಡಿದರು.‌

ಎರಿಯಾ ಸರ್ವೀಸ್ ಮೆನೇಜರ್ ಕಿಲ್ಲನ ರಮಣ ಬಾಬು ಅವರು ನೂತನ ಸರ್ವೀಸ್ ವಿಭಾಗವನ್ನು ಉದ್ಘಾಟಿಸಿದರು.

ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಮಹಮ್ಮದಾಲಿ ಫೈಝಿ ಇರ್ಫಾನಿ, ವಿಟ್ಲ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ
ಅಕ್ಕರಂಗಡಿ ಖತೀಬು ಉಸ್ಮಾನ್ ರಝಿ ಬಾಖಾವಿ ಭಾಗವಹಿಸಿದ್ದರು.

ಪ್ರಮುಖರಾದ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಎಂ ಎಸ್ ಮೊಹಮ್ಮದ್, ರಿಯಾಝ್ ಫರಂಗಿಪೇಟೆ, ಎಂ ಫ್ರೆಂಡ್ಸ್ ಸ್ಥಾಪಕಾಧ್ಯಕ್ಷ ರಶೀದ್ ವಿಟ್ಲ ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಪಿ.ಎಸ್ ಮೋಟರ್ಸ್ ನ ಪ್ರಥಮ ಶಾಖೆ ಇದಾಗಿದ್ದು, ಶುಭಾರಂಭದ ಪ್ರಯುಕ್ತ ವಾಹನ ಖರೀದಿಯಲ್ಲಿ 2000 ಡಿಸ್ಕೌಂಟ್ ನೀಡಲಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

ಪ್ರಥಮ ವಾಹನ ಖರೀದಿದಾರರಾದ
ಇರ್ಷಾದ್ ಚಂದಳಿಕೆ, ಇಸ್ಮಾಯಿಲ್, ಸಫ್ವಾನ್, ಎ ಎನ್ ಟಿ ಟ್ರೇಡಿಂಗ್, ಬಿ.ಕೆ ಅಬ್ದುಲ್ ಮುನೀರ್ ಅವರಿಗೆ ಕೀ ಹಸ್ತಾಂತರ ಮಾಡಲಾಯಿತು.

ಅನಘ ಮೋಟರ್ಸ್ ನ ವೆಂಕಟ ಫಾಣಿ ಎನ್, ಪಿ.ಎಸ್ ಅಹ್ಮದ್ ಬಶೀರ್, ವಿಟ್ಲ ಪಟ್ಟಣ ಪಂಚಾಯಿತಿ ಸದಸ್ಯರಾದ ಜಯಂತ ಸಿ.ಎಚ್, ವಿ.ಕೆ.ಎಂ ಅಶ್ರಪ್, ಪಿ.ಎಸ್ ಅಬ್ದುಲ್ ಹಮೀದ್, ಶಾಕೀರ್ ಅಳಕೆಮಜಲು, ಇಕ್ಬಾಕ್ ಶೀತಲ್, ಇದ್ರಿಸ್ ಪಿ.ಜೆ, ಅಬ್ದುಲ್ ಹಮೀದ್ ಬದ್ರಿಯಾ, ಖಲಂದರ್ ಪರ್ತಿಪ್ಪಾಡಿ, ವಿ.ಎಚ್ ಅಶ್ರಫ್ ಹಾಜಿ, ಉಬೈದ್ ವಿಟ್ಲ ಬಝಾರ್, ಸಂಸ್ಥೆಯ ಪಾಲುದಾರರಾದ ಅಬ್ದುಲ್ ಗಫೂರು, ಅಬ್ದುಲ್ ಲತೀಫ್, ಮೊಹಮ್ಮದ್ ಸಲೀಂ ಉಪಸ್ಥಿತರಿದ್ದರು.‌

ಅಬೂಬಕ್ಕರ್ ಅನಿಲಕಟ್ಟೆ ಸ್ವಾಗತಿಸಿದರು. ನೌಫಲ್ ಕುಡ್ತಮುಗೇರು ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!