March 21, 2026

ಕರ್ತವ್ಯ ನಿರ್ವಹಿಸುತ್ತಿದ್ದ ಅರೆವೈದ್ಯಕೀಯ ವಿದ್ಯಾರ್ಥಿ ಮೃತ್ಯು

0
image_editor_output_image1073259296-1644827724989.jpg

ಮಂಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದ ಅರೆವೈದ್ಯಕೀಯ ವಿದ್ಯಾರ್ಥಿಯೊಬ್ಬ ವಿಶ್ರಾಂತಿ ವೇಳೆ ನಿದ್ರಿಸುತ್ತಿದ್ದಾಗ ಅಲ್ಲೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಮೃತರನ್ನು ಉಪ್ಪಿನಂಗಡಿ ನಿವಾಸಿ , ನಾಗೇಶ್(23) ಎಂದು ಗುರುತಿಸಲಾಗಿದೆ.

ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಅರೆವೈದ್ಯಕೀಯ ಇಂಟರ್ ವಿದ್ಯಾರ್ಥಿಯಾಗಿದ್ದು , ಫೆ.13 ರ ರಾತ್ರಿ ಕೆ.ಎಸ್.ಹೆಗಡೆ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಆಸ್ಪತ್ರೆಯ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದಾಗ ಸಾವನ್ನಪ್ಪಿದ್ದಾರೆ.

ಇವರ ಸಾವಿಗೆ ಹೃದಯಾಘಾತದಿಂದ ನಾಗೇಶ್ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!