February 2, 2026

ಬೆಂಗಳೂರು: ಕೊಲೆ ಯತ್ನ ಕೇಸ್ ಅಡ್ವಕೇಟ್ ಜಗದೀಶ್ ಅರೆಸ್ಟ್

0
IMG_20220213_114038.jpg

ಬೆಂಗಳೂರು: ಕೋರ್ಟ್ ಅವರಣದಲ್ಲಿ ವಕೀಲರ ಗಲಾಟೆ ಪ್ರಕರಣದಲ್ಲಿ, ವಕೀಲ ಜಗದೀಶ್ ವಿರುದ್ಧ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ದೂರು ದಾಖಲಿಸಿದ್ದರು.

ಜಗದೀಶ್ ಕೋರ್ಟ್ ಆವರಣದಲ್ಲಿ ಗೂಂಡಾಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದ್ದಾರೆ, ಜೊತೆಗೆ ಕೊಲೆ ಯತ್ನ ನಡೆಸಿದ್ದಾರೆಂದು ಸುಬ್ಬಾರೆಡ್ಡಿ ದೂರು ನೀಡಿದ್ದರು ಈ ಕುರಿತು ವಕೀಲ ಜಗದೀಶ್ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಸದ್ಯ ಈ ಕೇಸ್ ಗೆ ಸಂಬಂಧಿಸಿದಂತೆ ತಡ ರಾತ್ರಿ ವಕೀಲ ಜಗದೀಶ್ ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಿನ್ನೆ ಪೊಲೀಸ್ ಕಮೀಷನರ್ ಕಮಲ್ ಪಂತ್ ಗೆ ಬಾರ್ ಕೌನ್ಸಿಲ್ ದೂರು ನೀಡಿತ್ತು.

Leave a Reply

Your email address will not be published. Required fields are marked *

error: Content is protected !!