March 21, 2026

ಮರದ ಕೊಂಬೆ ಬಿದ್ದು ಪುತ್ತೂರಿನ ಯುವಕ ಸ್ಥಳದಲ್ಲೇ ಮೃತ್ಯು

0
image_editor_output_image-957458003-1644398269015.jpg

ಪುತ್ತೂರು: ಮರದ ಕೊಂಬೆ ಬಿದ್ದು ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ನಡೆದಿದೆ.

ತಿಂಗಳಾಡಿ ಸಮೀಪದ ರೆಂಜಲಾಡಿ ನಿವಾಸಿ ಬಾತಿಷ್ ಸುಲ್ತಾನ್ (32) ಮೃತ ದುರ್ದೈವಿ.

ಪುತ್ತೂರು ಸಮೀಪದ ಪುರುಷರಕಟ್ಟೆ ಎಂಬಲ್ಲಿ ಮರ ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮೃತ ಬಾತಿಷ್ ಎಸ್‍ಕೆಎಸ್‍ಎಸ್‍ಎಫ್ ಸಕ್ರಿಯ ಸದಸ್ಯರಾಗಿದ್ದು, ತಾಯಿ, ಪತ್ನಿ, 6 ಮಂದಿ ಸಹೋದರರು, ಓರ್ವ ಸಹೋದರಿ ಹಾಗೂ 3 ವರ್ಷದ ಪುಟ್ಟ ಮಗುವನ್ನು ಅಗಲಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!