May 18, 2026

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಹಣ ಅಕ್ರಮ ಸಾಗಾಟ

0
Screenshot_2022-02-09-14-31-24-72_680d03679600f7af0b4c700c6b270fe7.jpg

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟಕ್ಕೆ ಯತ್ನಿಸುತ್ತಿದ್ದ ವಿದೇಶಿ ಹಣವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಫೆಬ್ರವರಿ 7 ಮತ್ತು 8 ರಂದು ಕ್ರಮವಾಗಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿದೇಶಿ ಕರೆನ್ಸಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಮೂಲದ ಪ್ರಯಾಣಿಕನೋರ್ವ 10,000 ಅಮೆರಿಕನ್ ಡಾಲರ್ ನ್ನು ಕರೆನ್ಸಿಯನ್ನು ಇಂಡಿಗೋ ವಿಮಾನ 6ಇ 1417 ದ ಮೂಲಕ ಶಾರ್ಜಾಕ್ಕೆ ಕಳ್ಳಸಾಗಣೆ ಮಾಡುವ ಯತ್ನದಲ್ಲಿದ್ದಾಗ ಆತನ ಬಳಿಯಿದ್ದ 100 ಡಾಲರ್ ನ ನೂರು ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮತ್ತೊಂದು ಪ್ರಕರಣದಲ್ಲಿ , ಮಂಗಳೂರಿನ ಪ್ರಯಾಣಿಕನು ೯೦,೦೦೦ ಯುಎಇ ದಿರ್ಹಾಮ್ ವಿದೇಶಿ ಹಣವನ್ನು ಬ್ಯಾಗ್‌ನಲ್ಲಿ ದುಬೈಗೆ ಏರ್ ಇಂಡಿಯಾ ವಿಮಾನದ ಮೂಲಕ ಕಳ್ಳ ಸಾಗಾಣೆಗೆ ಯತ್ನಿಸುತ್ತಿದ್ದಾಗ ಆತನನು ಬಂಧಿಸಿ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

ಕಳ್ಳಸಾಗಣೆ ಯತ್ನ ಪ್ರಕರಣಗಳಲ್ಲಿ 7,40,500 (USD 10,000) ಮತ್ತು 17,77,500 (90,000 UAE ದಿರ್ಹಾಮ್) ಒಟ್ಟಾರೆಯಾಗಿ 25,18,000 ಲಕ್ಷ ರೂ. ಮೌಲ್ಯದ ಹಣವನ್ನು ವಶಕ್ಕೆ ಪಡೆದುಕೊಂಡಿದ್ದು, ಅಪರಾಧ ಪ್ರಕರಣ ದಾಖಲಿಸಲಾಗಿದೆ.ರ

Leave a Reply

Your email address will not be published. Required fields are marked *

error: Content is protected !!