ಎಸ್.ಎಸ್.ಎಫ್ ಸುಳ್ಯ ಸೆಕ್ಟರ್ ವಾರ್ಷಿಕ ಕೌನ್ಸಿಲ್ ನವ ಸಾರಥ್ಯ
ಸುಳ್ಯ: ಎಸ್ ಎಸ್ ಎಫ್ ಸುಳ್ಯ ಸೆಕ್ಟರ್ ಇದರ 2021/22ನೇ ಸಾಲಿನ ವಾರ್ಷಿಕ ಮಹಾಸಭೆಯು ಫೆಬ್ರವರಿ-06 ರಂದು ಸುಳ್ಯ ಸೆಕ್ಟರ್ ಅಧ್ಯಕ್ಷರಾದ ಸಿದ್ದೀಕ್ ಬಿ.ಎ ರವರ ಅಧ್ಯಕ್ಷತೆಯಲ್ಲಿ ಅನ್ಸಾರ್ ಸಭಾ ಭವನದಲ್ಲಿ ನಡೆಯಿತು. ಅಬ್ದುಲ್ ರಶೀದ್ ಝೈನಿ ಪೆರಾಜೆ ದುವಾ ನೆರವೇರಿಸಿ ಸಭೆಯನ್ನು ಧನ್ಯಗೊಳಿಸಿದರು ,ಎಸ್ ಎಸ್ ಎಫ್ ದ ಕ ಜಿಲ್ಲಾ ಈಸ್ಟ್ ನಾಯಕರಾದ ಅಬೂಬಕ್ಕರ್ ಸಿದ್ದೀಕ್ ಗೂನಡ್ಕ ಪರಿಶುದ್ಧ ಕುರ್ ಆನ್ ವಚನಗಳಿಂದ ಸಭೆಯನ್ನು ಉದ್ಘಾಟಿಸಿದರು, ಡಿವಿಶನ್ ಅಧ್ಯಕ್ಷರಾದ ಎ.ಎಂ ಫೈಝಲ್ ಝುಹ್ರಿ ಕಲ್ಲುಗುಂಡಿಯವರು ಇಂದಿನ ಯುವಕರು ಮಾದಕ ದ್ರವ್ಯಗಳ ಮತ್ತು ಜೂಜಾಟದ ದಾಸರಾಗಿ ದಾರಿತಪ್ಪಿಸವುದರ ಬಗ್ಗೆ ಆರ್ಥಗರ್ಭಿತವಾದ ಹಿತನುಡಿಗಳನ್ನು ಕಾರ್ಯಕರ್ತರಿಗೆ ಸಮರ್ಪಿಸಿದರು.

ಸುಳ್ಯ ಸೆಕ್ಟರ್ ಪ್ರ.ಕಾರ್ಯದರ್ಶಿಯಾದ ಅಝೀಝ್ ಮಾಸ್ಟರ್ ಏಣಾವರ ವಾರ್ಷಿಕ ವರದಿಯನ್ನು ವಾಚಿಸಿದರು ಹಾಗೂ ಕೋಶಾಧಿಕಾರಿಯಾದ ಶರೀಫ್ ಜಯನಗರ ಲೆಕ್ಕಪತ್ರವನ್ನು ಮಂಡಿಸಿದರು.ಮಹಾಸಭೆಯ ವೀಕ್ಷಕರಾಗು ಡಿವಿಷನ್ ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಖಿ, ಸೆಕ್ಟರ್ ಉಸ್ತುವಾರಿ ಸಿರಾಜುದ್ದೀನ್ ಹಿಮಮಿ ಕುಂಬಕ್ಕೊಡು, ಡಿವಿಷನ್ ನಾಯಕರಾದ ನೌಷಾದ್ ಕೆರೆಮೂಲೆ, ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ, ಶಮೀರ್ ಮೊಗರ್ಪಣೆ, ಕಬೀರ್ ಜಟ್ಟಿಪಲ್ಲ, ಸ್ವಬಾಹ್ ಹಿಮಮಿ ಬೀಜಕೊಚ್ಚಿ ಹಾಗೂ ಅತಿಥಿಯಾಗಿ ಎಸ್.ವೈ.ಎಸ್ ಗಾಂಧಿನಗರ ಬ್ರಾಂಚ್ ಅಧ್ಯಕ್ಷರ ಸಿದ್ದೀಕ್ ಕಟ್ಟೆಕ್ಕಾರ್ ಹಾಗೂ ಹಲವಾರು ಸುನೀ ನಾಯಕರು ಭಾಗಹಿಸಿ ಮುಂದಿನ ಪದಾಧಿಕಾರಿಗಳನ್ನು ಆಯ್ಕೆ ಮಾಡುವಲ್ಲಿ ಯಶಸ್ವಿಯಾದರು.

ಅಧ್ಯಕ್ಷರಾಗಿ ಬಶೀರ್ ಕಲ್ಲುಮುಟ್ಲು, ಪ್ರ.ಕಾರ್ಯದರ್ಶಿಯಾಗಿ ಮಶೂದ್ ಹಿಮಾಮಿ ಏಣಾವರ, ಕೋಶಾಧಿಕಾರಿಯಾಗಿ ಅಬ್ದುಲ್ ರಶೀದ್ ಝೈನಿ ಪೆರಾಜೆ, ಕ್ಯೂ.ಡಿ ಕಾರ್ಯದರ್ಶಿಯಾಗಿ ಜುನೈದ್ ಮೊಗರ್ಪಣೆ, ಸಿ ಸಿ ಕಾರ್ಯದರ್ಶಿಯಾಗಿ ಸಿಯಾದ್ ಜಯನಗರ, ದಅವಾ ಕಾರ್ಯದರ್ಶಿಯಾಗಿ ಸೈಫುದ್ದೀನ್ ಅಶ್ರಫಿ, ರೀಡ್ ಪ್ಲಸ್ ಕಾರ್ಯದರ್ಶಿಯಾಗಿ ಇರ್ಫಾನ್ ಏಣಾವರ, ಮೀಡಿಯಾ ಕಾರ್ಯದರ್ಶಿಯಾಗಿ ಸ್ವಾದಿಕ್ ಅರಂಬೂರು, ರೈಂಬೊ ಕಾರ್ಯದರ್ಶಿಯಾಗಿ ಇಸ್ಹಾಕ್ ಗೂನಡ್ಕ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಇಜಾಝ್ ಗೂನಡ್ಕ, ವಿಸ್ಡಮ್ ಕಾರ್ಯದರ್ಶಿಯಾಗಿ ಜುನೈದ್ ಕಲ್ಲುಗುಂಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಝೀಝ್ ಏಣಾವರ, ಸಲೀಕ್ ಕಲ್ಲುಗುಂಡಿ, ಜಾಬಿರ್ ಗೂನಡ್ಕ, ಆಬಿದ್ ಕಲ್ಲುಮುಟ್ಲು, ಆಸಿಫ್ ಮೋಗರ್ಪಣೆ, ಬದ್ರುದ್ದೀನ್ ಮೋಗರ್ಪಣೆ, ಅನ್ವರ್ ಏಣಾವರ, ರುನೈಜ್ ಕಲ್ಲುಗುಂಡಿ, ಜುಹೈಲ್ ಕಲ್ಲುಗುಂಡಿ , ಉನೈಸ್ ಗೂನಡ್ಕ. ಈ ಸಭೆಯನ್ನು ಸೆಕ್ಟರ್ ಕಾರ್ಯದರ್ಶಿಯವರಾದ ಬಶೀರ್ ಕಲ್ಲುಮುಟ್ಲು ಸ್ವಾಗತಿಸಿ, ಸಿಯಾದ್ ಜಯನಗರ ವಂದಿಸಿದರು.




