February 1, 2026

ಎಮ್.ಎನ್.ಜಿ.ಫೌಂಡೇಶನ್(ರಿ) ವತಿಯಿಂದ ಬೋಳಮೆ ಮಸೀದಿಗೆ ಕೊಳವೆ ಬಾವಿ ನಿರ್ಮಾಣ..

0
IMG_20220208_212722.jpg

ಬಂಟ್ವಾಳ: ಸಜೀಪ ಸಮೀಪದ ಬೋಳಮೆ ಎಂಬಲ್ಲಿಯ ರಹಮಾನ್ ಜುಮಾ ಮಸೀದಿಗೆ ನೀರಿನ ಅಭಾವವಿದ್ದು, ಬೋರ್‌ವೆಲ್‌ನ ಅಗತ್ಯವಿದೆ ಎಂದು ಮನವಿ ಬಂದಾಗ ದಾನಿಯೊಬ್ಬರ ಸಹಕಾರದಿಂದ ಎಮ್.ಎನ್.ಜಿ.ಫೌಂಡೇಶನ್(ರಿ) ಸಂಸ್ಥೆಯು ಮಸೀದಿಗೆ ಬೋರ್‌ವೆಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಮಸೀದಿಯ ಖತೀಬರಾದ ಈಸುಬ್ ಉಸ್ತಾದ್ ದುಆ‌ದೊಂದಿಗೆ ಚಾಲನೆ ನೀಡಿದರು. ಮಸೀದಿಯ ಅಧ್ಯಕ್ಷರಾದ ನಾಸಿರ್ ಬೋಳಮೆ, ಉಪಾಧ್ಯಕ್ಷರಾದ ರಫೀಕ್ ಬೋಳಮೆ, ಕಾರ್ಯದರ್ಶಿ ತಫ್ಸೀರ್ ಹಾಗೂ ಎಮ್.ಎನ್.ಜಿ. ಫೌಂಡೇಶನ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಇಲ್ಯಾಸ್ ಮಂಗಳೂರು, ಪದಾಧಿಕಾರಿಗಳಾದ ಮನ್ಸೂರು ಬಿ.ಸಿ.ರೋಡ್, ಶಿಹಾಬ್ ತಂಙಳ್ ಮತ್ತು ಸದಸ್ಯರಾದ ಫೈಝಲ್ ಸಂತೋಷ್ ನಗರ, ಹನೀಫ್ ಸಜೀಪ, ಫಯಾಝ್ ಸಂತೋಷ್ ನಗರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!