May 18, 2026

ಮಹಿಳೆಯನ್ನು ಬೆತ್ತಲುಗೊಳಿಸಿ 9 ಮಂದಿಯಿಂದ ಹಲ್ಲೆ: ನಗರ ಪೊಲೀಸ್ ಆಯುಕ್ತರಿಗೆ ದೂರು

0
image_editor_output_image1845866624-1644298724183.jpg

ಆನೇಕಲ್: ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಯನ್ನು ಬೆತ್ತಲುಗೊಳಿಸಿ, 9 ಮಂದಿ ಥಳಿಸಿದ್ದು, ಈ ಸಂಬಂಧ ಕೇಸ್ ದಾಖಲಿಸಲು ಹೋದಾಗ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ಈ ಸಂಬಂಧ ಮಹಿಳೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರಿಗೆ ದೂರು ಸಲ್ಲಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಸಂತ್ರಸ್ತೆ ಆನೇಕಲ್‌ನಲ್ಲಿರುವ ತನ್ನ ನಿವಾಸದಿಂದ ಬೆಳ್ಳಂದೂರಿನಲ್ಲಿರುವ ತನ್ನ ತಾಯಿಯ ಮನೆಗೆ ಬಂದಿದ್ದಳು. ಸ್ವಲ್ಪ ಹೊತ್ತಿನ ನಂತರ ಆಕೆ ಮನೆ ಮುಂದೆ ಅಂಗಳ ಗುಡಿಸಲು ಆರಂಭಿಸಿದ್ದಳು, ಇದಕ್ಕೆ ಪಕ್ಕದ ಮನೆಯ ರಾಮು ಮುನಿವೆಂಕಟಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನಂತರ ಇತರ ಒಂಬತ್ತು ಮಂದಿ ಅವನೊಂದಿಗೆ ಸೇರಿಕೊಂಡಿದ್ದಾರೆ.

ಮಾತಿನ ಸಮರ ತಾರಕಕ್ಕೇರಿದನಂತರ, ಅವರು ಆಕೆಯ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿದ್ದಾರೆ.  ಈ ವೇಳೆ ಸಂತ್ರಸ್ತೆ 1.2 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನೂ ಕಳೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಸ್ವಲ್ಪ ಸಮಯದ ನಂತರ, ಅವಳ 22 ವರ್ಷದ ಮಗ ಗೌತಮ್ ಕಾಲೇಜಿನಿಂದ ಬಂದನು, ತನ್ನ ತಾಯಿ ತನ್ನ ಅಜ್ಜಿಯ ಮನೆಯ ಮುಂದೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದಾನೆ, ಅವಳ ಬಟ್ಟೆ ಹರಿದುಹೋಗಿತ್ತು.

ಪ್ರಜ್ಞೆ ಮರಳಿದ ನಂತರ ಮತ್ತು ಘಟನೆಯನ್ನು ತನ್ನ ಮಗನಿಗೆ ವಿವರಿಸಿದಾಗ, ಆತ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ, ಬೆಳ್ಳಂದೂರು ಪೊಲೀಸರನ್ನು ಸಂಪರ್ಕಿಸಲು ಆತನಿಗೆ ಹೊಯ್ಸಳ ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!