ಕಾಂಗ್ರೆಸ್ ಸದಸ್ಯತ್ವ ಅಭಿಯಾನ: ಮಂಗಳೂರಿಗೆ ಬಂದಿಳಿದ ಡಿಕೆಶಿ
ಮಂಗಳೂರು: ಕಾಂಗ್ರೆಸ್ ಪಕ್ಷದಿಂದ ಹೊಸ ಸದಸ್ಯತ್ವ ಅಭಿಯಾನ ಆರಂಭಗೊಂಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕರಾವಳಿ ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು ಮಂಗಳೂರು ಏರ್‌ಪೋರ್ಟ್‌ನಲ್ಲಿ ಮಾಧ್ಯಮದ ಜೊತೆ ಮಾತನಾಡಿ, ಕಾಂಗ್ರೆಸ್ ಪಕ್ಷ ಒಂದು ರಾಷ್ಟ್ರೀಯ ಪಕ್ಷ.
ಸ್ವಾತಂತ್ರ್ಯ ತಂದು ಕೊಟ್ಟು 75 ವರ್ಷ ಆಗಿದೆ. ಭಾರೀ ಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಪಥದದಲ್ಲಿ ಮುನ್ನಡೆಸಿದೆ. ಈ ದೇಶಕ್ಕೆ ಕಾಂಗ್ರೆಸ್ ಆಡಳಿತ ಮತ್ತೆ ಬೇಕಾಗಿದೆ.
ನಾಯಕಿ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಮತ್ತೆ ಪಕ್ಷವನ್ನು ಸಂಘಟನೆ ಮಾಡಲಾಗುತ್ತಿದೆ. ಇದಕ್ಕೋಸ್ಕರ ಸದಸ್ಯತ್ವ ಅಭಿಯಾನ ಮಾಡಲಾಗುತ್ತಿದೆ.
ಚುನಾವಣೆಗೆ ಸಂಬಂಧಿಸಿ ಪಕ್ಷ ಪೂರ್ವ ಸಿದ್ಧತೆ ಮಾಡುತ್ತಿದೆ. ಕಾಂಗ್ರೆಸ್ ಗೆಲ್ಲುವ ವಿಚಾರದಲ್ಲಿ ಪಕ್ಷದ ಕಾರ್ಯಕರ್ಥರ ಮಾತಿಗೂ ನಾವು ಬೆಲೆ ಕೊಡಲಿದ್ದೇವೆ. ಇದಕ್ಕೋಸ್ಕರ ಹೆಚ್ಚಿನ ಸಂಘಟನೆ ನಡೆಸಲಿದ್ದೇವೆ ಎಂದರು.
ಅಶಾಂತಿ ಸೃಷ್ಟಿಸುವುದು ಅವರ ಡ್ಯೂಟಿ
ಬಿಜೆಪಿ ನಾಯಕರ ಕೆಲಸವೇ ಮಕ್ಕಳಲ್ಲಿ ಅಶಾಂತಿ ಮೂಡಿಸುವುದು. ಈ ಕೆಲಸವನ್ನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂದು ರಾಜ್ಯದಲ್ಲಿ ಹಿಜಾಬ್ ಹಾಗೂ ಕೇಸರಿ ವಿವಾದದ ಬಗ್ಗೆ ಮಂಗಳೂರಿನಲ್ಲಿಂದು ಪ್ರತಿಕ್ರಿಯಿಸಿದ್ದಾರೆ. ದೇಶದಲ್ಲಿ, ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವುದು ಅವರ ಡ್ಯೂಟಿ. ನಮ್ಮ ಪಾರ್ಟಿಯ ವಿರುದ್ಧ ಮಾತನಾಡುವುದೇ ಅವರ ಕೆಲಸ ಎಂದರು.




