March 21, 2026

ಉಳ್ಳಾಲ: ಆಟೋ ಚಾಲಕನ ಮೇಲೆ ದಾಳಿ ನಡೆಸಿ ಹಲ್ಲೆ

0
IMG_20220122_113448.jpg

ಮಂಗಳೂರು: ಯುವಕನ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ತೊಕ್ಕೊಟ್ಟು ಬಳಿ ನಡೆದಿದೆ.

ಇಬ್ರಾಹೀಂ ಹರ್ಷದ್ (31) ಹಲ್ಲೆಗೊಳಗಾದ ಯುವಕ.
ಖಾಸಗಿ ಬಸ್ ನಿರ್ವಾಹಕ ಯಶ್ಚಿತ್ ಹಾಗೂ ಇತರ ಇಬ್ಬರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಹಲ್ಲೆಗೊಳಗಾದ ಯುವಕ‌ ಆರೋಪಿಸಿದ್ದಾರೆ.

ದುಷ್ಕರ್ಮಿಗಳಲ್ಲಿ‌ ಓರ್ವ ಸಂಘಪರಿವಾರ ಸಂಘಟನೆಯಲ್ಲಿ‌ ಗುರುತಿಸಿಕೊಂಡಿದ್ದ ಎನ್ನಲಾಗಿದೆ.

ಸಂತ್ರಸ್ತ ಯುವ ರಿಕ್ಷಾ ಚಾಲಕನಾಗಿದ್ದು, ತೊಕ್ಕೊಟ್ಟು ಆಟೋ ರಿಕ್ಷಾ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರನ್ನು ಕರೆದುಕೊಂಡು ಹೋಗುತ್ತಿರುವಾಗ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ.

ಈ ಕುರಿತು ಉಳ್ಳಾಲ‌ ಠಾಣೆಯ ಲ್ಲಿ ಕೇಸ್ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!