March 21, 2026

ಕುಂದಾಪುರ: ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕೂರಲು ವ್ಯವಸ್ಥೆ: ಧರ್ಮ, ಜಾತಿ ಆಧರಿತ ಶಿಕ್ಷಣವೇ, ಪ್ರಜ್ಞಾವಂತರ ಪ್ರಶ್ನೆ

0
image_editor_output_image-1631182472-1644212230924.jpg

ಕುಂದಾಪುರ: ಇನ್ನು ಹಿಜಾಬ್ – ಕೇಸರಿ ಶಾಲು ವಿವಾದ ಕುಂದಾಪುರ ಸರ್ಕಾರಿ ಕಾಲೇಜಿನಲ್ಲೂ ಮುಂದುವರಿದಿದ್ದು,ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರ ಜೊತೆ ಸರ್ಕಾರದ ಆದೇಶ ತಿಳಿಸಿ ಪ್ರಾಂಶುಪಾಲರ ಮಾತುಕತೆ ನಡೆಸಿದ್ದಾರೆ.

ಆದರೆ ಹಿಜಾಬ್ ಧರಿಸಿ ತರಗತಿಗೆ ಹೋಗಲು ವಿದ್ಯಾರ್ಥಿನಿಯರ ಪಟ್ಟು ಹಿಡಿದಿದ್ದು, ಮನವೊಲಿಕೆಗೆ ಸ್ಪಂದಿಸದ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕೂರಲು ವ್ಯವಸ್ಥೆ ಮಾಡಿದ್ದಾರೆ.

ಇದೇ ವಿದ್ಯಾರ್ಥಿನಿಯರು ಕಳೆದ ವಾರ ಗೇಟಿನಿಂದ ಹೊರಗೆ ಕುಳಿತು ಪ್ರತಿಭಟಿಸಿದ್ದರು.

ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಕೂರಲು ವ್ಯವಸ್ಥೆ ಮಾಡಿರುವುದು ಧರ್ಮ, ಜಾತಿ ಆಧಾರಿತ ಶಿಕ್ಷಣದ ಮೂಲಕ ಎರಡನೇ ಪ್ರಜೆಯಾಗಿ ನೋಡುತ್ತಿದೆ. ಇದು ಅಲ್ಪಸಂಖ್ಯಾತ ಮುಸ್ಲಿಮರನ್ನು ಶಿಕ್ಷಣ ದಿಂದ ವಂಚಿಸುವ ಹುನ್ನಾರ ಎಂದು ಪ್ರಗತಿಪರರು ಹಾಗೂ ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!