June 10, 2026

ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಎನ್‌.ಸುತಾರ ಹೃದಯಘಾತದಿಂದ ನಿಧನ

0
image_editor_output_image-1537003824-1644033387163

ಬಾಗಲಕೋಟೆ: ಪದ್ಮಶ್ರೀ ಪುರಸ್ಕೃತರ ಇಬ್ರಾಹಿಂ ಎನ್‌.ಸುತಾರ ಹೃದಯಘಾತದಿಂದ ಮುಂಜಾನೆ ‌ನಿಧನರಾಗಿದ್ದಾರೆ

ಬಾಗಲಕೋಟ ಜಿಲ್ಲೆಯ, ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಶ್ರೀ ಇಬ್ರಾಹೀಮ ಎನ್. ಸುತಾರ
ವೈದಿಕ, ವಚನ ಮತ್ತು ಸೂಫಿ ಪರಂಪರೆಗಳ ಕುರಿತು ಭಜನೆ, ಪ್ರವಚನ, ಸಂವಾದಗಳ ಮೂಲಕ ಜನರಲ್ಲಿ ಭಾವೈಕ್ಯತೆ ಉಂಟು ಮಾಡುತ್ತಿರುವ ತತ್ವಪದಕಾರರು ಮತ್ತು ಪ್ರವಚನಕಾರರು. ಇದಕ್ಕಾಗಿ ಅವರ ಸಾಧನೆ ಗುರುತಿಸಿ ಇವರಿಗೆ 2018ರ ಪದ್ಮಶ್ರೀ ಪ್ರಶಸ್ತಿಯನ್ನು ಕೊಡಲಾಗಿದೆ.

ಬಡಕುಟುಂಬದಲ್ಲಿ ಜನಿಸಿದ ಇವರು 1970 ರಲ್ಲಿ ‘ಭಾವೈಕ್ಯ ಜನಪದ ಸಂಗೀತ ಮೇಳ’ ವನ್ನು ಸ್ಥಾಪಿಸಿದರು. ಕಳೆದ 44 ವರ್ಷಗಳಿಂದ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆಯ ಮುಖಾಂತರ ಸರ್ವಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆ ಸಂದೇಶವನ್ನು ಬೀರುತ್ತ ಬಂದಿರುತ್ತಾರೆ. ಪ್ರತಿವರ್ಷ ನೂರಾರು ಕಾರ್ಯ ಕ್ರಮಗಳನ್ನು ನೀಡುತ್ತ, ಹಿಂದು-ಮುಸ್ಲಿಂ ರಲ್ಲಿ ಭಾವೈಕ್ಯತೆ ಬೆಸೆಯುವ ಪವಿತ್ರ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು

Leave a Reply

Your email address will not be published. Required fields are marked *

error: Content is protected !!