June 10, 2026

2022ರ ಐಪಿಎಲ್ ಕಪ್ ನಮ್ದೆ ಎಂದ ಗ್ಲೆನ್ ಮ್ಯಾಕ್ಸ್‌ವೆಲ್‌

0
Screenshot_2022-02-04-14-29-05-91_680d03679600f7af0b4c700c6b270fe7.jpg

ಹೊಸದಿಲ್ಲಿ: ಮುಂಬರುವ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಆರ್ಸಿಬಿ ತಂಡ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ಹಾದಿಯಲ್ಲಿ ನಾವೆಲ್ಲಾ ಅತ್ಯುತ್ತಮ ಪ್ರದರ್ಶನ ತೋರುತ್ತೇವೆಂದು ಆರ್ಸಿಬಿ ಬ್ಯಾಟ್ಸ್‌ಮನ್‌ ಗ್ಲೆನ್ ಮ್ಯಾಕ್ಸ್ವೆಲ್ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

2021ರ ಆವೃತ್ತಿಯಲ್ಲಿ ಆರ್‌ಸಿಬಿ ಪರ ಮೊಟ್ಟ ಮೊದಲ ಬಾರಿ ಐಪಿಎಲ್‌ ಆಡಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಡಿದ್ದ 15 ಪಂದ್ಯಗಳಲ್ಲಿ 144.10 ಸ್ಟ್ರೈಕ್‌ ರೇಟ್‌ನೊಂದಿಗೆ 513 ರನ್‌ ಚೆಚ್ಚಿದ್ದರು. ಈ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ಹಾಗೂ ಮೊಹಮ್ಮದ್‌ ಸಿರಾಜ್‌ ಅವರೊಂದಿಗೆ ಬೆಂಗಳೂರು ಫ್ರಾಂಚೈಸಿ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನೂ 2022ರ ಐಪಿಎಲ್‌ ಟೂರ್ನಿಗೆ ಉಳಿಸಿಕೊಂಡಿದೆ.

ಹದಿನೈದನೇ ಆವೃತ್ತಿಯ ಹರಾಜು ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಫ್ರಾಂಚೈಸಿ ಆರ್‌ಸಿಬಿಗೆ ಸೂಕ್ತವಾಗುವ ನಾಯಕ ಹಾಗೂ ಆಟಗಾರರನ್ನು ಖರೀದಿಸಲು ಅಗತ್ಯ ತಯಾರಿಯನ್ನು ನಡೆಸುತ್ತಿದೆ.

Leave a Reply

Your email address will not be published. Required fields are marked *

error: Content is protected !!