May 16, 2026

ಆಸ್ಮಿಯಂ ಸ್ಪಾಂಜ್ ಬಳಸಿ ನಕಲಿ ಚಿನ್ನದ ಬಿಸ್ಕೆಟ್‌ ತಯಾರಿಕೆ: ನಾಲ್ವರ ಬಂಧನ

0
Screenshot_2022-02-04-14-20-12-73_680d03679600f7af0b4c700c6b270fe7.jpg

ಬೆಂಗಳೂರು: ಆಸ್ಮಿಯಂ ಸ್ಪಾಂಜ್ ಮತ್ತು ಇತರ ಲೋಹಗಳ ಮಿಶ್ರಣವನ್ನು ಬಳಸಿ ನಕಲಿ ಚಿನ್ನದ ಬಿಸ್ಕೆಟ್‌ಗಳನ್ನು ತಯಾರಿಸುತ್ತಿದ್ದ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ರಾಜೇಶ್ ಭೋಸ್ಲೆ (44), ಅಜಯ್ ಕಾಂತಿಲಾಲ್ (19), ಅಕ್ಷಯ್ ಬಜರಂಗ್ (26) ಮತ್ತು ಹೃತಿಕ್ ಬಾಬಾಸಾಬ್ ಸಾಳುಂಕೆ (19) ಎಂದು ಗುರ್ತಿಸಲಾಗಿದೆ. 

ಆರೋಪಿಗಳು ಚಿನ್ನದ ಶುದ್ಧತೆಯನ್ನು ಪ್ರಮಾಣೀಕರಿಸುವ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ನಕಲಿ ಸೀಲ್‌ಗಳನ್ನು ಬಳಸಿ ಕಲಬೆರಕೆ ಚಿನ್ನವನ್ನು ಪರಿಶುದ್ಧ ಚಿನ್ನವೆಂದು ಮಾರಾಟ ಮಾಡುತ್ತಿದ್ದರು. ಇದೇ ರೀತಿ ಪ್ರತಿ ದಿನ 3ರಿಂದ 5 ಕೆಜಿ ಚಿನ್ನವನ್ನು ಆರೋಪಿಗಳು ವಿಲೇವಾರಿ ಮಾಡುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದು ವಿಶೇಷ ವಿಚಾರಣಾ ದಳದ ಇನ್ಸ್ ಪೆಕ್ಟರ್ ರವಿ ಪಾಟೀಲ್ ನೇತೃತ್ವದ ತಂಡ ನಗರ್’ಪೇಟೆಯಲ್ಲಿದ್ದ ಮಾತಾಜಿ ಜಿವೆಲ್ಲರಿ ಮಾರ್ಕೆಟ್ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿ ಮಾಲೀಕನ ಸಮೇತ ಕಲಬೆರಕೆ ದಂಧೆಯಲ್ಲಿ ತೊಡಗಿದ್ದವರನ್ನು ಬಂಧನಕ್ಕೊಳಪಡಿಸಿದ್ದಾರೆ. 

ಬಂಧಿತ ಆರೋಪಿಗಳಿಂದ 1.7 ಕೆಜಿ ಚಿನ್ನಾಭರಣ, 20 ಸಾವಿರ ನಗದು ಹಾಗೂ ನಕಲಿ ಸೀಲುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!