June 10, 2026

ಉಡುಪಿ: ಜಿಲ್ಲೆಯ ಮತ್ತೊಂದು ಕಾಲೇಜ್ ಗೆ ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು

0
IMG-20220204-WA0002.jpg

ಬೈಂದೂರು: ಉಡುಪಿಯ ಜಿಲ್ಲೆಯ ಗಡಿಭಾಗದಲ್ಲೂ ವಸ್ತ್ರಸಂಹಿತೆ ಸದ್ದು ಮಾಡಿದೆ. ಇಂದು ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು ಆವರಣ ಪ್ರವೇಶಿಸಿದ್ದಾರೆ. ಆದರೆ ಪ್ರಾಂಶುಪಾಲರು ತಾತ್ಕಾಲಿಕವಾಗಿ ವಿವಾದ ತಣ್ಣಗಾಗಿಸಿದ್ದಾರೆ.

ಇಂದು ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಬಂದಿದ್ದಾರೆ. ಜೊತೆಗೆ ಹಿಂದೂ ಸಂಘಟನೆಯ ಪ್ರಮುಖರು ಸಹ ಆಗಮಿಸಿದ್ದಾರೆ.

ತಕ್ಷಣವೇ ಎಚ್ಚೆತ್ತ ಕಾಲೇಜು ಪ್ರಾಂಶುಪಾಲರು ಹಿಂದೂ ಸಂಘಟನೆಯ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಎಲ್ಲರಿಗೂ ವಸ್ತ್ರಸಂಹಿತೆ ಅನುಸರಿಸುವಂತೆ ಆದೇಶ ನೀಡಿ, ಹೀಗಾದರೆ ಮಾತ್ರ ನಮ್ಮ ವಿದ್ಯಾರ್ಥಿಗಳು ಸಹ ಕೇಸರಿ ಶಾಲು ಧರಿಸುವುದಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!