November 22, 2024

ಪರಿಯಾಲ್ತಡ್ಕ ಬ್ಲಿಝ್ ಲಂಡನ್ ವಿದ್ಯಾಸಂಸ್ಥೆ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಗೆ ಸನ್ಮಾನ

0

ವಿಟ್ಲ: ಬ್ಲಿಝ್ ಲಂಡನ್ ಪ್ರೀಸ್ಕೂಲ್ , ಮನಿಲ, ಪರಿಯಾಲ್ತಡ್ಕ ಆಯೋಜಿಸಿದ “ಬ್ಲಿಝ್ ಟ್ಯಾಲೆಂಟ್‌ ಎಕ್ಸ್ಪೋ 2022” ಕಾರ್ಯಕ್ರಮ ದಲ್ಲಿ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಬ್ಲಿಝ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಅಶ್ರಫ್ ರಝಾ ಅಮ್ಜದಿ ವಹಿಸಿದ್ದರು. ಮಾಜಿ‌ ದ.ಕ.ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಂ.ಎಸ್ .ಮುಹಮ್ಮದ್ ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ಅಭಿವೃದ್ಧಿ ಹಾಗೂ ಮಕ್ಕಳ ಕಲಿಕಾ ಅಭಿವೃದ್ಧಿ ಯನ್ನು ಶ್ಲಾಘಿಸಿದರು. ಮಕ್ಕಳಿಗಾಗಿ ಆಸ್ತಿ ಮಾಡುವುದಕ್ಕೆ ಬದಲಾಗಿ ಮಕ್ಕಳನ್ನೇ ಆಸ್ತಿ ಯನ್ನಾಗಿ ಮಾಡಿ ಎಂದು ನುಡಿದರು.

ಬ್ಲಿಝ್ ಲಂಡನ್ ಪ್ರಿಸ್ಕೂಲ್ ನೆಟ್‌ವರ್ಕ್ ನ ಡೈರೆಕ್ಟರ್ ಪಿ.ಎ.ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ ಮುಖ್ಯ ಪ್ರಭಾಷಣ ನಿರ್ವಹಿಸಿ ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದ ಮುಖ್ಯ ಧಾರೆಯಲ್ಲಿ ನಿಲ್ಲುವಂತಾಗಬೇಕು. ಮಕ್ಕಳ ಸರ್ವತೋಮುಖ ಅಭಿವೃದ್ಧಿ ಯನ್ನು ಬಯಸಿ ಮನಃಶಾಸ್ತ್ರಜ್ಞರು ತಯಾರುಮಾಡಿದ ಬ್ಲಿಝ್ ಲಂಡನ್ ನ ಪಾಠ್ಯಪದ್ದತಿ ಬಗ್ಗೆ ವಿವರಣೆ ನೀಡಿದರು.

ಊರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ರಂಶೀಲಾ ಶಫೀಕ್, ಸಂಪ್ಯ ಪೋಲಿಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಅಬ್ದುರ್ರಹ್ಮಾನ್, ಹಾಫಿಲ್ ನಿಝಾರ್, ಮುಹಮ್ಮದ್ ಬಿ.ಕಾಂ., ನಾಟಿವೈದ್ಯೆ ಹಜ್ಜುಮ್ಮ ಖದೀಜಮ್ಮ , ಇಬ್ರಾಹಿಂ ಮುಸ್ಲಿಯಾರ್ ಅಚ್ಚಿಲ, ಹಾಜಿ ಅಬುಬಕ್ಕರ್ ಕುಟ್ಟಿತಡ್ಕ, ಮುಹಮ್ಮದ್ ಕುಂಞಿ, ಮುಹಮ್ಮದ್ ಕಲ್ಲಾಜೆ, ದ್ವಿತೀಯ ಪಿಯುಸಿ ಯಲ್ಲಿ ಉತ್ತಮ ಶ್ರೇಣಿಯಲ್ಲಿ ಅಂಕಪಡೆದ ಆಯಿಶತ್ ರೈಹಾನ, ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಮಾರ್ಕ್ ಪಡೆದ ಆಯಿಶತ್ ರಿದಾ ಸೇರಿದಂತೆ ಹನ್ನೊಂದು ಮಂದಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ತದನಂತರ ಶಾಲಾ ಮಕ್ಕಳಿಂದ “ಬ್ಲಿಝ್ ಪ್ರತಿಭಾ ಪ್ರದರ್ಶನ 2022” ಎಂಬ ವಿಶೇಷ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ಸ್ಥಳೀಯ ಖತೀಬ್ ಹಸೈನಾರ್ ಫೈಝಿ,
ಮುಂಡೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಯಾಕೂಬ್ ಮುಲಾರ್, ಇಬ್ರಾಹಿಂ ಹಾಜಿ ಮಾಳಿಗೆ,
ರಝಾಕ್ ಹಾಜಿ‌ ಮನಿಲ, ಕಮರುದ್ದೀನ್ ಪರಿಯಾಲ್ತಡ್ಕ, ಅಬ್ಬು ಹಾಜಿ ಸಾಜ, ಎಂ.ಎಸ್. ಶಫೀಕ್ , ಹನೀಫ್ ಸಿಟಿ ಮೊಬೈಲ್, ರಝಾಕ್ ಪಾಲಸ್ತಡ್ಕ, ಇಸ್ಮಾಯಿಲ್ ನಾಟೆಕಲ್ಲು, ಅಬೂಬಕ್ಕರ್ ಸಿದ್ದೀಕ್ ರಝ್ವಿ ಫುರ್ಖಾನಿ, ಮುಹಮ್ಮದ್ ಶರೀಫ್ ಸ’ಅದಿ, ನಝೀರ್ ಸ’ಅದಿ, ಉಮರುಲ್ ಫಾರೂಕ್ ಹನೀಫಿ, ಎಂ.ಎಸ್ ಹಮೀದ್ ಮಣಿಲ, ಉಪಸ್ಥಿತರಿದ್ದರು.

ಬ್ಲಿಝ್ ಎಜುಕೇಶನ್ ಏಂಡ್ ಚಾರಿಟೇಬಲ್ ಟ್ರಸ್ಟ್ ಪರಿಯಾಲ್ತಡ್ಕ ಇದರ ಪ್ರ.ಕಾರ್ಯದರ್ಶಿ ಶಾಫಿ ಮಾಳಿಗೆ ಸ್ವಾಗತಿಸಿ ನೂರ್ ಮುಹಮ್ಮದ್ ನೀರ್ಕಜೆ ಕಾರ್ಯಕ್ರಮ ನಿರೂಪಿಸಿದರು, ರಫೀಕ್ ಕುಟ್ಟಿತಡ್ಕ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!