May 16, 2026

ಉಪ್ಪಿನಂಗಡಿ: ಟ್ರಕ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಭರದಲ್ಲಿ ಲಾರಿ ಪಲ್ಟಿ

0
IMG-20220203-WA0003.jpg

ಉಪ್ಪಿನಂಗಡಿ: ಅತಿ ವೇಗದಿಂದ ಬರುತ್ತಿದ್ದ ಟ್ರಕ್ ತನ್ನ ಲಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಮಗುಚಿಬಿದ್ದ ಘಟನೆ ಕರ್ವೇಲ್ ಅಲಂಗೂರು ಎಂಬಲ್ಲಿ ನಡೆದಿದೆ.

ಛತ್ತೀಸ್ಗಢ ದಿಂದ ಉಪ್ಪಿನಂಗಡಿಯ ಬೀಡಿ ಫ್ಯಾಕ್ಟರಿಯೊಂದಕ್ಕೆ ಲಾರಿಯಲ್ಲಿ ಬೀಡಿ ಎಲೆಗಳನ್ನು ಸಾಗಿಸುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಅತೀ ವೇಗವಾಗ ಬಂದ ಟ್ರಕ್ ಲಾರಿಗೆ ಢಿಕ್ಕಿಯಾಗುವ ಸಂಭವವಿದ್ದು, ಇದನ್ನರಿತ ಲಾರಿ ಚಾಲಕ ಲಾರಿಯನ್ನು ರಸ್ತೆಯ ಬದಿಗೆ ಇಳಿಸಿದ್ದು, ಈ ಸಂದರ್ಭ ಲಾರಿ ಮಗುಚಿಬಿದ್ದಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯವಾಗದೇ ಲಾರಿ ಚಾಲಕ ಹಾಗೂ ಕ್ಲೀನರ್ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!