March 21, 2026

ಪಥಸಂಚಲನದ ವೇಳೆ ಕುಸಿದು ಬಿದ್ದು ಪೊಲೀಸ್ ಕಾನ್‍ಸ್ಟೇಬಲ್ ಮೃತ್ಯು

0
Screenshot_2022-02-03-13-35-00-41_680d03679600f7af0b4c700c6b270fe7.jpg

ಥಾಣೆ: ದಿನನಿತ್ಯದ ಪಥಸಂಚಲನ ನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದು ಪೊಲೀಸ್ ಕಾನ್‍ಸ್ಟೇಬಲ್ ಸಾವನ್ನಪ್ಪಿದ್ದ ಘಟನೆ ಥಾಣೆ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ನಗರ ಪೊಲೀಸ್ ್ಟೀಮ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 27 ವರ್ಷದ ಮಹೇಶ ಮೋರೆ ಮೃತಪಟ್ಟ ಕಾನ್‌ಸ್ಟೆಬಲ್ ಆಗಿದ್ದಾರೆ.

ಮೃತ ಮಹೇಶ ಮೋರೆ ನಗರ ಪೊಲೀಸ್‌ನ ಕ್ವಿಕ್ ರೆಸ್ಪಾನ್ಸ್ ಟೀಮ್‌ನಲ್ಲಿ (ಕ್ಯೂಆರ್‌ಟಿ) ನೇಮಕಗೊಂಡಿದ್ದರು. ಇಂದು ಬೆಳಗ್ಗೆ 7.30ರ ಸುಮಾರಿಗೆ ಪರೇಡ್ ನಡೆಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ ತಕ್ಷಣ ಅವರನ್ನ ಥಾಣೆ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರ ಸಾವಿನ ಕಾರಣ ಇನ್ನೂ ತಿಳಿದುಬಂದಿಲ್ಲ ಮತ್ತು ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ದಿನನಿತ್ಯ ಬೆಳಗಿನ ಪರೇಡ್ ನೆಡೆಯುವುದು ವಾಡಿಕೆ ಆದರಂತೆ ಇಂದು 7 ಗಂಟೆಗೆ ಸಿಬ್ಬಂದಿ ಬಂದಿದ್ದರು ಕೆಲ ಹೊತ್ತಿನಲ್ಲೇ ಈ ಘಟನೆ ನಡೆದಿದೆ. ಥಾಣೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ತನಿಖೆ ನಡೆಸುತ್ತಿದ್ದಾರೆ .

Leave a Reply

Your email address will not be published. Required fields are marked *

You may have missed

error: Content is protected !!