July 24, 2026

ದಾರಿಗೆ ಅಡ್ಡಬಂದ ಹಾವನ್ನು ತಪ್ಪಿಸುವ ವೇಳೆ ನಾಲೆಗೆ ಉರುಳಿದ ಕಾರು: ಪತ್ನಿ ಮೃತ್ಯು, ಪತಿಗೆ ಗಾಯ

0
image_editor_output_image-2113055487-1643869241677.jpg

ಶಿವಮೊಗ್ಗ :ಗಾಜನೂರು ಬಳಿ ದಾರಿಗೆ ಅಡ್ಡಬಂದ ಹಾವನ್ನು ತಪ್ಪಿಸಲು ಹೋಗಿ ಕಾರೊಂದು ತುಂಗಾ ಎಡದಂಡೆ ನಾಲೆಗೆ ಉರುಳಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಪತಿ ಬದುಕುಳಿದಿದ್ದಾರೆ.

ಗುರುವಾರ ಬೆಳಗ್ಗಿನ ಜಾವ 3 ಗಂಟೆಗೆ ಘಟನೆ ನಡೆದಿದ್ದು, ನೀರಿನಲ್ಲಿ ಮುಳುಗಿ ಸುಷ್ಮಾ( 28) ಸಾವನ್ನಪ್ಪಿದ್ದು, ಪತಿ ಚೇತನ್ ಕುಮಾರ್ ಪಾರಾಗಿದ್ದಾರೆ.

ಚೇತನ್ ತಾಯಿಯ ಆನಾರೋಗ್ಯದ ವಿಚಾರ ತಿಳಿದು ತಡರಾತ್ರಿಯೇ ದಂಪತಿಗಳು ಶಿವಮೊಗ್ಗದಿಂದ ತುಮಕೂರಿಗೆ ಹೊರಟಿದ್ದರು ಎಂದು ತಿಳಿದು ಬಂದಿದೆ.

ನಾಲೆಯ ಪಕ್ಕದ ರಸ್ತೆಯಲ್ಲಿ ತೆರಳುವ ವೇಳೆಗೆ ಕಾರಿಗೆ ಹಾವು ಅಡ್ಡಬಂದಿದ್ದು , ಈ ವೇಳೆ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಕಾರು ನಾಲೆಗೆ ಉರುಳಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!