ಮಾಜಿ ಶಾಸಕ ಅಶೋಕ ಪಟ್ಟಣಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪಕ್ಷದ ಘನತೆಗೆ ಕುಂದುಂಟಾಗುವಂತೆ ಮಾತನಾಡಿರುವುದಕ್ಕೆ ಸಮಜಾಯಿಷಿ ನೀಡಿ’ ಎಂದು ಬೆಳಗಾವಿ ರಾಮದುರ್ಗ ಕ್ಷೇತ್ರದ ಮಾಜಿ ಶಾಸಕ ಅಶೋಕ ಪಟ್ಟಣ ಅವರಿಗೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್ ನೀಡಿದೆ.
ಸಮಿತಿ ಅಧ್ಯಕ್ಷ ಕೆ. ರಹಮಾನ್ ಖಾನ್, ‘ನಿಮ್ಮ ಮಾತನ್ನು ಪಕ್ಷ ನಿರಾಕರಿಸುತ್ತದೆ. ಪಕ್ಷದ ಘನತೆಗೆ ಕುಂದು ತಂದಿದ್ದೀರಿ. ನಿಮ್ಮ ನಡವಳಿಕೆ ಬಗ್ಗೆ ಏಳು ದಿನಗಳಲ್ಲಿ ಸಮಜಾಯಿಷಿ ನೀಡಬೇಕು’ ಎಂದು ಸೂಚಿಸಿದ್ದಾರೆ. ಇದಕ್ಕೆ ಅಶೋಕ ಪಟ್ಟಣ, ‘ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಈ ಬಗ್ಗೆ ಉತ್ತರಿಸುತ್ತೇನೆ’ ಎಂದು ಹೇಳಿದ್ದಾರೆ.
ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಜ.29ರಂದು ನಡೆಸಿದ ಸುದ್ದಿಗೋಷ್ಠಿಗೆ ಮೊದಲು, ಅಶೋಕ ಆಡಿದ್ದ ಪಿಸುಮಾತು ಮಾಧ್ಯಮಗಳಲ್ಲಿ ವರದಿಯಾಗಿತ್ತು.