July 23, 2026

ಮಂಗಳೂರು: ತಲವಾರು ಹಿಡಿದು ಕಾಲೇಜ್ ಬಳಿ ದಾಂಧಲೆ

0
image_editor_output_image277644831-1643777090692.jpg

ಮಂಗಳೂರು: ತಂಡವೊಂದು ತಲವಾರು ಹಿಡಿದು ಬಲ್ಲಾಳ್‌ ಬಾಗ್ ಸಮೀಪದ ಕಾಲೇಜೊಂದರ ಬಳಿ ಫೆ 1 ರ ಮಂಗಳವಾರ ಸಂಜೆ ದಾಂಧಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ವಾಹನಗಳ ನಡುವೆ ಢಿಕ್ಕಿಯಾದ ವಿಚಾರದ ಬಗ್ಗೆ ವಿದ್ಯಾರ್ಥಿಗಳ ನಡುವೆ ಮಾತುಕತೆ ನಡೆದಿತ್ತು ಎನ್ನಲಾಗಿದ್ದು ಇದಾದ ಸ್ವಲ್ಪಸಮಯದ ನಂತರ ಯುವಕರ ತಂಡವೊಂದು ತಲವಾರು ಸಮೇತ ಕಾಲೇಜು ಬಳಿ ಆಗಮಿಸಿ ಕೆಲವು ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಬರ್ಕೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಪೊಲೀಸರು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!