ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮರಳಿ ತಮ್ಮೂರಿಗೆ ಹೊರಟಿದ್ದ ವೇಳೆ ಟ್ಯಾಕ್ಟರ್ ಢಿಕ್ಕಿ: ಕಾರಿನಲ್ಲಿದ್ದ ಮೂವರು ಮೃತ್ಯು

ಬಾಗಲಕೋಟೆ: ಸಂಬಂಧಿಕರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಮರಳಿ ತಮ್ಮೂರಿಗೆ ಹೊರಟಿದ್ದ ಮೂವರ ಬದುಕೇ ಅಂತ್ಯವಾಗಿದೆ. ಜಿಲ್ಲೆಯ ಬಾದಾಮಿ ತಾಲೂಕಿನ ಜಾಲಿಹಾಳ ಬಳಿ ಕಾರಿಗೆ ಟ್ಯಾಕ್ಟರ್ ಢಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಗದಗ ಜಿಲ್ಲೆಯ ಹಡಗಲಿ ಗ್ರಾಮದ ಬಸನಗೌಡ ಪಾಟೀಲ (60), ಮಂಜುನಾಥ ಮಾರನಬಸರಿ (38), ಸಂಗಮ್ಮ ಪಾಟೀಲ (55) ಎಂದು ಗುರುತಿಸಲಾಗಿದೆ.
ಟ್ಯಾಕ್ಟರ್ ಮತ್ತು ಕಾರು ಢಿಕ್ಕಿಯಾದ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಮತ್ತೋರ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ಘಟನೆಯಲ್ಲಿ ಇನ್ನೂ ಇಬ್ಬರು ಗಾಯಗೊಂಡಿದ್ದು, ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.