“ಓಮಿಕ್ರಾನ್”ಗಿಂತ “ಓ ಮಿತ್ರೋ” ತುಂಬಾ ಅಪಾಯಕಾರಿ: ಶಶಿ ತರೂರ್
ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡುವಾಗ ತಮ್ಮ ಭಾಷಣಗಳಲ್ಲಿ ಬಳಸುವ ಜನಪ್ರಿಯ ಪದ ‘ಮಿತ್ರೋ’ ಅನ್ನು ಗೇಲಿ ಮಾಡಿದ್ದಾರೆ.
ಜನವರಿ 31, ಸೋಮವಾರದಂದು ತಮ್ಮ ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಕುಟುಕಿ ಓಮಿಕ್ರಾನ್ ಗಿಂತ ‘ಓ ಮಿತ್ರೋ’ ತುಂಬಾ ಅಪಾಯಕಾರಿ ಎಂದು ಅವರು ಹೇಳಿದ್ದಾರೆ





