June 10, 2026

ಮಂಗಳೂರು: ರಾತ್ರಿ ಕರ್ತವ್ಯದಲ್ಲಿದ್ದಾಗ ವೀಡಿಯೊ ಗೇಮ್: ವೆನ್ಲಾಕ್ ಸಿಬ್ಬಂದಿ ಅಮಾನತು

0
IMG_20220129_233758.jpg

ಮಂಗಳೂರು: ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಕ್ಯಾಶುವಲ್ಟಿ ವಿಭಾಗದಲ್ಲಿ ರಾತ್ರಿ ವೇಳೆ ಕರ್ತವ್ಯದಲ್ಲಿದ್ದ ಸಂದರ್ಭ ವೀಡಿಯೊ ಗೇಮ್ ಆಡುತ್ತಿದ್ದ ಆರೋಪದ ಮೇಲೆ ಸಿಬ್ಬಂದಿಯೋರ್ವನನ್ನು ಅಮಾನತು ಮಾಡಿ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕರು ಆದೇಶಿಸಿದ್ದಾರೆ.

ಈತ ಕೆಎಂಸಿ ಆಸ್ಪತ್ರೆಯ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಯಾಶುವಲ್ಟಿ ಸಿಬ್ಬಂದಿಯಾಗಿದ್ದ. ಈತ ಜ.23ರಂದು ರಾತ್ರಿ ಕರ್ತವ್ಯದಲ್ಲಿದ್ದ ಸಂದರ್ಭ ವೀಡಿಯೊ ಗೇಮ್ ಆಡುತ್ತಿದ್ದ ಎನ್ನಲಾಗಿದ್ದು, ವೀಡಿಯೊ ಫೇಸ್ ಬುಕ್ ನಲ್ಲಿ ವೈರಲ್ ಆಗಿತ್ತು.

ಈ ಬಗ್ಗೆ ವೆನ್ಲಾಕ್ ಅಧೀಕ್ಷಕರು ತನಿಖೆ ನಡೆಸಿದ್ದರು. ಆಗ ಕೆಎಂಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಯಿಂದ ಈ ಕೃತ್ಯ ನಡೆದಿರೋದು ಸಾಬೀತಾಗಿದೆ. ಆದ್ದರಿಂದ ವಿದ್ಯಾರ್ಥಿಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ. ಅಲ್ಲದೆ, ಮುಂದೆ ಇಂತಹ ಕೃತ್ಯ ಮರುಕಳಿಸದಂತೆ ಎಚ್ಚರ ವಹಿಸಲು ವೈದ್ಯಾಧಿಕಾರಿ ಸ್ಪಷ್ಟ ಆದೇಶ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!