ಸುಬ್ರಹ್ಮಣ್ಯ: 18 ವರ್ಷದ ಯುವತಿ ನಾಪತ್ತೆ
ಸುಬ್ರಹ್ಮಣ್ಯ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಪ ಗ್ರಾಮದ ಕಾಪಿನಕಾಡು ಮನೆ ಬೀದಿಗುಡ್ಡೆಯ ಯುವತಿಯೋರ್ವಳು ನಾಪತ್ತೆಯಾದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಳ್ಪ ಕಾಪಿನಕಾಡು ಶ್ವೇತಾ (18) ಎಂಬ ಯುವತಿ ಜ.27ರಂದು ಮದ್ಯಾಹ್ನ ದಿಂದ ಜ.28ರ ಬೆಳಗ್ಗಿನ ಮಧ್ಯೆ ಮನೆಯಿಂದ ನಾಪತ್ತೆಯಾಗಿದ್ದು ಈ ವರೆಗೆ ಪತ್ತೆಯಾಗಿರುವುದಿಲ್ಲ ಎಂದು ಸುಬ್ರಹ್ಮಣ್ಯ ಠಾಣೆಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.




