ಫ್ಲೋರಿಡಾದ ವಿಹಾರ ನೌಕೆಯಲ್ಲಿ ಅಮಲೇರಿಸುವ ಪಾನೀಯ ನೀಡಿ ಅತ್ಯಾಚಾರ: ಖ್ಯಾತ ಗಾಯಕ ಕ್ರಿಸ್ ಬ್ರೌನ್ ವಿರುದ್ಧ ದೂರು ದಾಖಲು
ಲಾಸ್ ಏಂಜಲೀಸ್: ಕ್ಯಾಲಿಫೋರ್ನಿಯಾದ ಖ್ಯಾತ ಗಾಯಕ ಕ್ರಿಸ್ ಬ್ರೌನ್ ವಿರುದ್ಧ ಅತ್ಯಾಚಾರದ ಮೊಕದ್ದಮೆ ಹೂಡಲಾಗಿದ್ದು, ಫ್ಲೋರಿಡಾದ ವಿಹಾರ ನೌಕೆಯೊಂದರಲ್ಲಿ ತನಗೆ ಅಮಲೇರಿಸುವ ಪಾನೀಯ ನೀಡಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಗಾಯಕನಿಂದ 20 ಮಿಲಿಯನ್ ಡಾಲರ್ ಪರಿಹಾರವನ್ನು ಅವರು ಕೋರಿದ್ದಾರೆ.
ಗುರುವಾರ ದಾಖಲಾಗಿರುವ ಸಿವಿಲ್ ಮೊಕದ್ದಮೆಯ ಪ್ರಕಾರ, ನೃತ್ಯ ಸಂಯೋಜಕಿ, ನರ್ತಕಿ, ಮಾಡೆಲ್ ಮತ್ತು ಸಂಗೀತ ಕಲಾವಿದೆಯಾಗಿದ್ದ ಮಹಿಳೆಯನ್ನು ಬ್ರೌನ್ ಅವರು ನೌಕೆಗೆ ಆಹ್ವಾನಿಸಿದ್ದರು.
ಅಲ್ಲಿ ಆವರು ನನಗೆ ನೀಡಿದ್ದ ಪಾನೀಯವು ದಿಗ್ಭ್ರಮೆಗೊಳಿಸಿತು ಮತ್ತು ದೈಹಿಕವಾಗಿ ಅಸ್ಥಿರಗೊಳಿಸಿತು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ನನ್ನ ವಿರೋಧದ ನಡುವೆಯೂ ಬ್ರೌನ್ ನನ್ನನ್ನು ಮಲಗುವ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದರು ಎಂದು ಮಹಿಳೆ ಆರೋಪಿಸಿದ್ದಾರೆ
‘ಸಂತ್ರಸ್ತೆ ಜೇನ್ ಡೋ ಅನುಭವಿಸಿದ ಅತ್ಯಂತ ನೋವಿನ ಆಘಾತಕಾರಿ ಘಟನೆ ನಮ್ಮ ಆತ್ಮಸಾಕ್ಷಿಯನ್ನು ಆಘಾತಗೊಳಿಸಿದವು ಮತ್ತು ನಮ್ಮೆಲ್ಲರನ್ನು ಭಯಭೀತಗೊಳಿಸುತ್ತವೆ’ಎಂದು ಲಾಸ್ ಏಂಜಲೀಸ್‌ನಲ್ಲಿ ದಾಖಲಾದ ಮೊಕದ್ದಮೆಯಲ್ಲಿ ವಕೀಲರು ವಿವರಿಸಿದ್ದಾರೆ.




