March 22, 2026

ಪಬ್‌ಜಿ ಎಫೆಕ್ಟ್: ತಾಯಿ ಸಹಿತ ಮೂವರು ಒಡಹುಟ್ಟಿವದರನ್ನೇ ಕೊಂದ ಬಾಲಕ

0
Screenshot_2022-01-29-12-10-43-99_680d03679600f7af0b4c700c6b270fe7.jpg

ಇಸ್ಲಾಮಾಬಾದ್‌: ಪಬ್‌ಜಿ ಆಡುವುದನ್ನು ಬಿಟ್ಟು ಓದು ಎಂದು ಬೈದಿದ್ದಕ್ಕೆ, 14 ವರ್ಷದ ಬಾಲಕ ತಾಯಿ ಹಾಗೂ ಮೂವರು ಒಡಹುಟ್ಟಿವದರನ್ನೇ ಕೊಂದಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.

ನಹೀದ್‌ ಮುಬಾರಕ್‌(45),ಆಕೆಯ 22 ತಿಂಗಳ ಮಗು ತೈಮುರ್‌ ಮತ್ತು 17, 11 ವರ್ಷದ ಇಬ್ಬರು ಹೆಣ್ಣು ಮಕ್ಕಳು ಮೃತರಾಗಿದ್ದಾರೆ. ನಹೀದ್‌ರ 14 ವರ್ಷದ ಮಗ ಪಬ್‌ಜಿ ಆಟವನ್ನು ಚಟವಾಗಿ ಮಾಡಿಕೊಂಡಿದ್ದನಂತೆ. ಈ ವಿಚಾರವಾಗಿ ಇತ್ತೀಚೆಗೆ ನಹೀದ್‌, ಮಗನಿಗೆ ಬೈದಿದ್ದಾಳೆ.

ಅದೇ ಸಿಟ್ಟಿನಿಂದ ಆತ, ರಾತ್ರಿ ವೇಳೆ ಅಮ್ಮ, ಅಣ್ಣ, ಅಕ್ಕ ಮತ್ತು ತಂಗಿಗೆ ಮನೆಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಮಾರನೇ ದಿನ ಬೆಳಗ್ಗೆ ಈ ವಿಚಾರ ಪೊಲೀಸರಿಗೆ ತಲುಪಿದ್ದು, ಬಾಲಕ ತಪ್ಪೊಪ್ಪಿ ಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!