March 22, 2026

ಮದುವೆಯಾಗುವುದಾಗಿ ನಂಬಿಸಿ ನಟಿಯ ಮೇಲೆ ಅತ್ಯಾಚಾರ:
ಸ್ಯಾಂಡಲ್‌‌ವುಡ್ ನಿರ್ಮಾಪಕನ ಬಂಧನ

0
Screenshot_2022-01-29-10-30-52-05_680d03679600f7af0b4c700c6b270fe7.jpg

ಬೆಂಗಳೂರು: ಕನ್ನಡ ಸಿನಿಮಾ ನತಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಅರೋಪದ ಹಿನ್ನೆಲೆಯಲ್ಲಿ ಸ್ಯಾಂಡಲ್‌‌ವುಡ್ ನಿರ್ಮಾಪಕರೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತರನ್ನು ವಿಷನ್​ 2023 ಎಂಬ ಸಿನಿಮಾದ ನಟ, ನಿರ್ಮಾಪಕ ಹರ್ಷವರ್ಧನ್​ ಟಿ.ಜಿ. ಎಂದು ಗುರುತಿಸಲಾಗಿದೆ.

ನಿರ್ಮಾಪಕ ಹರ್ಷವರ್ಧನ್​ ಟಿ.ಜಿ ವಿರುದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಸಿನಿಮಾ ನಟಿ ನೀಡಿದ ದೂರಿನ ಮೇರೆಗೆ ಕ್ರಮ ಕೈಗೊಂಡಿರುವ ಪೊಲೀಸರು ಹರ್ಷವರ್ಧನ್​ ಅವರನ್ನು ಬಂಧಿಸಿದ್ದಾರೆ.

ಇನ್ನು ಸಿನಿಮಾಗಳಲ್ಲಿ ಸಹನಟಿಯಾಗಿ ನಟಿಸುತ್ತಿದ್ದ ಮಹಿಳೆಗೆ ಹರ್ಷವರ್ಧನ್ ಮದುವೆಯಾಗುವುದಾಗಿ ನಂಬಿಸಿ ಕಳೆದ 2 ವರ್ಷಗಳಿಂದ ನನ್ನನ್ನು ದೈಹಿಕವಾಗಿ ಬಳಕೆ ಮಾಡಿಕೊಂಡಿದ್ದಾರೆ. ಮದುವೆ ಮಾಡಿಕೊಳ್ಳುವಂತೆ ಕೇಳಿಕೊಂಡಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ಹರ್ಷವರ್ಧನ್ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 417, 376, 504, 506 ಅಡಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!