March 19, 2026

ಆರ್ಥಿಕ ಸಂಕಷ್ಟ: ಆಟೋ ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ

0
Screenshot_2022-01-28-10-49-36-68_680d03679600f7af0b4c700c6b270fe7.jpg

ಉಡುಪಿ: ಆಟೋ ರಿಕ್ಷಾ ಚಾಲಕನೊಬ್ಬ ತನ್ನ ಸಹೋದರನಿಗೆ ಸೇರಿದ ಕೇಟರಿಂಗ್ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಂಕರಪುರದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕನನ್ನು ಮುದರಂಗಡಿದ ರಾಜೇಶ್ ದೇವಾಡಿಗ ಎಂದು ಗುರುತಿಸಲಾಗಿದೆ.

ಮನೆ ನಿರ್ಮಾಣ ಹಾಗೂ ಇತರೆ ಉದ್ದೇಶಗಳಿಗಾಗಿ ರಾಜೇಶ್‌ ಹಲವಾರು ಸಾಲಗಳನ್ನು ಮಾಡಿದ್ದು, ಅದನ್ನು ತೀರಿಸಲಾಗದೇ ಬೇಸರದಲ್ಲಿದ್ದ ಎನ್ನಲಾಗಿದೆ.

ಈ ಎಲ್ಲಾ ಸಮಸ್ಯೆಗಳಿಂದ ಮನನೊಂದು ರಾಜೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಪತ್ನಿ ನೀಡಿದ ದೂರಿನ ಮೇರೆಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!