ಬಸ್ಸಿನಲ್ಲಿ ಗುಪ್ತಾಂಗ ತೋರಿಸಿ ವಿದ್ಯಾರ್ಥಿನಿಗಳ ಜತೆ ಅಸಭ್ಯ ವರ್ತನೆ; ವಿಟ್ಲ- ಮಂಗಳೂರು ಖಾಸಗಿ ಬಸ್ಸಿನ ಕಂಡಕ್ಟರ್ ನ ಬಂಧನ
ಮಂಗಳೂರು: ಬಸ್ಸಿನಲ್ಲಿ ತನ್ನ ಗುಪ್ತಾಂಗ ತೋರಿಸಿ ವಿದ್ಯಾರ್ಥಿನಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಬಸ್ ಕಂಡಕ್ಟರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಉಪ್ಪಿನಂಗಡಿ ಕಲ್ಲೇರಿ ನಿವಾಸಿ ಇರ್ಫಾನ್ (32 ವರ್ಷ ) ಬಂಧಿತ ಆರೋಪಿ. ಪ್ರಸ್ತುತ ಈತ ಉಪ್ಪಿನಂಗಡಿ
ಕರ್ವೇಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು , ವಿಟ್ಲ-ಮಂಗಳೂರು ಖಾಸಗಿ ಬಸ್ ನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿಕೊಂಡಿರುತ್ತಾನೆ.
ಮಂಗಳೂರು ವಿಟ್ಲ ಬಸ್ ಕಂಡಕ್ಟರ್ ಆಗಿದ್ದು, ದಿನಾಂಕ 9/7/2026 ರಂದು ಸಂಜೆ ಸುಮಾರು 5:00 ಗಂಟೆಗೆ ಕಾಲೇಜು ವಿದ್ಯಾರ್ಥಿನಿಯ ರನ್ನು ಗುರಿಯಾಗಿರಿಸಿಕೊಂಡು ಬಸ್ಸಿನಲ್ಲಿ ತನ್ನ ಗುಪ್ತಾಂಗ ಪ್ರದರ್ಶನ ಮಾಡಿ ಅಸಭ್ಯವಾದ ಸನ್ನೆಯನ್ನು ಮಾಡಿ ಹಿಂದಿನ ಸೀಟಿಗೆ ಬಾ ಎಂದು ವಿದ್ಯಾರ್ಥಿನಿಯರನ್ನು ಕರೆದು ಲೈಂಗಿಕ ಕಿರುಕುಳ ನೀಡಿದ ಆರೋಪಿತನ ವಿರುದ್ಧ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.




