July 10, 2026

ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್ ಜಂಟಿ ಸಭೆ

0
IMG-20220127-WA0010.jpg

ಬಂಟ್ವಾಳ: ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್ ಇದರ ಜಂಟಿ ಸಭೆ ಸಿದ್ಧಕಟ್ಟೆಯ ಪಿಂಕಿ ಟವರ್ಸ್ನಲ್ಲಿ ನೆರವೇರಿತು.

ಸಿ.ಸಿ.ಟೆ.ಕ್ ಪಾಲಿಟೆಕ್ನಿಕ್ ಕಾಲೇಜು ಬೊಂದೆಲ್ ಮಂಗಳೂರು ಇದರ ವತಿಯಿಂದ ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಇದರ ಆಶ್ರಯದಲ್ಲಿ ನಾಲ್ಕು ತಿಂಗಳಿಂದ ನಡೆಯುತ್ತಿದ್ದ ಟೈಲರಿಂಗ್ ಹಾಗೂ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

Salute to the silent workers ಎಂಬ ವಿಶೇಷ ಪರಿಕಲ್ಪನೆಯಲ್ಲಿ ಊರಿನ ವೈದ್ಯಕೀಯ, ಸಾಮಾಜಿಕ, ಧಾರ್ಮಿಕ, ವ್ಯವಹಾರ, ಸೇವಾ ಕ್ಷೇತ್ರದ ತೆರೆಮರೆಯ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ವೈದ್ಯಕೀಯ ಕ್ಷೇತ್ರದ ಸಾಧಕ ರಾಮರಾಯ್ ಪ್ರಭು, ಪತ್ರಿಕಾ ವಿತರಕರಾದ ರಾಮ ಲಕ್ಷ್ಮಣ, ನಿವೃತ್ತ ಹಾಲು ಪರಿವೀಕ್ಷಕ ಕಮಲಾಧರ, ತುಳು ಜಾನಪದ ಕ್ಷೇತ್ರದ ಪ್ರತಿಭೆ ಪುಷ್ಪ ಕುಸುಮ ಸಾಲಿಯಾನ್ ಇವರನ್ನು ಸನ್ಮಾನಿಸಲಾಯಿತು. ರೊಟೇರಿಯನ್ ಗಳಾದ ಡಾ. ಯೋಗೀಶ್ ಕೈರೋಡಿ, ವಾಸುದೇವ ಆಚಾರ್ಯ, ಗಣೇಶ್ ಶೆಟ್ಟಿ ಮತ್ತು ರವೀಂದ್ರ ನಾಯಕ್ ಸನ್ಮಾನ ಪತ್ರ ವಾಚಿಸಿದರು.

ನೂತನವಾಗಿ ಆರಂಭಗೊಂಡ ಸಿದ್ಧಕಟ್ಟೆಯ ಚರ್ಚ್ ಅಂಗನವಾಡಿ ಕೇಂದ್ರಕ್ಕೆ ಬೇಬಿ ಚಯರ್, ಅಫ್ರೋನ್, ಕಪಾಟನ್ನು ಹಸ್ತಾಂತರಿಸಲಾಯಿತು.
ವಿವೇಕಾನಂದ ಜಯಂತಿ ಹಾಗೂ ಗಣರಾಜ್ಯೋತ್ಸವ ದಿನದ ಪ್ರಾಮುಖ್ಯತೆಯ ಬಗ್ಗೆ ವಾರದ ಮಾತುಕತೆಯಲ್ಲಿ ವಿನಯಚಂದ್ರ ಜೈನ್ ಮಾತನಾಡಿದರು.
ನಿಯೋಜಿತ ಗವರ್ನರ್ ರೋಟೇರಿಯನ್ ಪ್ರಕಾಶ್ ಕಾರಂತ್, ಅಸಿಸ್ಟೆಂಟ್ ಗವರ್ನರ್ ಸುರೇಂದ್ರ ಕಿಣಿ, ಝೋನಲ್ ಸೆಕ್ರೆಟರಿ ಜಯರಾಮ್ ರೈ, ಝೋನಲ್ ಲೆಫ್ಟಿನೆಂಟ್ ಗಳಾದ ಮಹಾವೀರ ಜೈನ್, ಅವಿಲ್ ಮಿನೇಜಸ್, ರೋಟೇರಿಯನ್ ಗಳಾದ ನಾರಾಯಣ ಹೆಗಡೆ, ಮಂಜುನಾಥ್ ಆಚಾರ್ಯ, ಎಲಿಯಾಸ್ ಸ್ಯಾಂಥಿಸ್, ರಹೀಂ ಪಿ.ಎ, ಗೋವರ್ಧನ್, ಅಮರ್, ಸತೀಶ್, ಸುಧೀರ್ ಶೆಟ್ಟಿ, ಡಾ. ಸುದೀಪ್, ಜೆರಾಲ್ಡ್ ಡಿ ಕೋಸ್ತ, ರೋಟರಿ ಬಂಟ್ವಾಳ ಲೊರೆಟ್ಟೋ ಹಿಲ್ಸ್ ಅಧ್ಯಕ್ಷರಾದ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.

ರೋಟರಿ ಸಿದ್ಧಕಟ್ಟೆ ಫಲ್ಗುಣಿಯ ಅಧ್ಯಕ್ಷರಾದ ಮೈಕಲ್ ಡಿಕೋಸ್ತ ಸ್ವಾಗತಿಸಿ, ರಮೇಶ್ ನಾಯಕ್ ವಂದಿಸಿದರು. ಭರತ್ ಜೈನ್ ಹಾಗೂ ರಾಜೇಶ್ ನೆಲ್ಯಾಡಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!