March 23, 2026

ವಿಟ್ಲ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ ಮನೆಗೆ ಭೇಟಿ ನೀಡಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ನಿಯೋಗ: ಶಾಲು ಹೊದಿಸಿ ಸನ್ಮಾನ

0
IMG_20220126_151257.jpg

ವಿಟ್ಲ: ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡ ಕೇಪು ಗ್ರಾಮದ ಅಮೈ ನಿವಾಸಿ ಮಹಾಲಿಂಗ ನಾಯ್ಕ ಅವರ ಮನೆಗೆ ಬಂಟ್ವಾಳ ತಹಶೀಲ್ದಾರರ ನಿಯೋಗ ಭೇಟಿ ನೀಡಿ ಸನ್ಮಾನಿಸಲಾಯಿತು.

ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಅವರು ತಮ್ಮ ಸಿಬ್ಬಂದಿಗಳ ಜತೆ ಭೇಟಿ ನೀಡಿದ್ದು, ಮಹಾಲಿಂಗ ನಾಯ್ಕ ಅವರು ಕೊರೆದ ಸುರಂಗ ಮತ್ತು ತೋಟಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮಹಾಲಿಂಗ ನಾಯ್ಕ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಪದ್ಮಶ್ರೀ ಪ್ರಶಸ್ತಿ ಸಿಕ್ಕಿದ್ದು, ಖಷಿ ತಂದಿದೆ. ದ.ಕ ಜಿಲ್ಲಾಡಳಿತ ವತಿಯಿಂದ ಇಂದು ನಡೆಸಿದ ಗೌರವಾರ್ಪಣೆ ತುಂಬನೇ ಖಷಿ ತಂದಿದೆ ಎಂದು ಮಹಾಲಿಂಗ ನಾಯ್ಕ ತಿಳಿಸಿದರು.

ಈ ಸಂದರ್ಭ ಉಪತಹಶೀಲ್ದಾರ್ ದಿವಾಕರ ಮುಗುಳ್ಯ, ನವೀನ್ ಕುಮಾರ್, ಕಂದಾಯ ನಿರೀಕ್ಷಕ ಮಂಜುನಾಥ, ಗ್ರಾಮ ಕರಣಿಕ ವಿನುತಾ, ಗ್ರಾಮ ಸಹಾಯಕ ಗಣೇಶ, ತಾಲೂಕ ಕಚೇರಿಯ ಸುಂದರ, ಶಿವಪ್ರಸಾದ್, ಮಹಮ್ಮದ್ ಆಸೀಪ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!