March 23, 2026

ಹಿಜಬ್ ಇಲ್ಲದೇ ಇರಲಾಗದಿದ್ದರೇ ಆನ್ ಲೈನ್ ತರಗತಿ ಆಯ್ಕೆ ಮಾಡಿಕೊಳ್ಳಬಹುದು: ಶಾಸಕ ರಘುಪತಿ ಭಟ್

0
Screenshot_2022-01-26-14-43-50-17_680d03679600f7af0b4c700c6b270fe7.jpg

ಉಡುಪಿ: ಉಡುಪಿ ಮಹಿಳಾ ಕಾಲೇಜಿನ ಹಿಜಬ್ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ಉನ್ನತ ಸಮಿತಿ ರಚಿಸಿದ್ದು ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದೆ, ಹಾಗಾಗಿ ಸಮಿತಿ ವರದಿ ಬರುವವರೆಗೂ
ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಘುಪತಿ ಭಟ್, ಸರ್ಕಾರದ ಆದೇಶದಂತೆ ಕಾಲೇಜಿನಲ್ಲಿ ಹಿಜಬ್ ಧರಿಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಸಮಿತಿಯಿಂದ ರಾಜ್ಯ ಸರ್ಕಾರಕ್ಕೆ ವರದಿ ಬರುವವರೆಗೆ ಉಡುಪಿಯ ಮಹಿಳಾ ಸರ್ಕಾರಿ ಪಿಯು ಕಾಲೇಜಿನಲ್ಲಿ ಯಥಾಸ್ಥಿತಿ ಅನುಸರಿಸಬೇಕು ಮತ್ತು ಹಿಜಬ್‌ಗೆ ಅವಕಾಶ ನೀಡುವುದಿಲ್ಲ ಎಂದು ರಘುಪತಿ ಭಟ್ ಹೇಳಿದ್ದಾರೆ, ಈ ಸಂಬಂಧ ವಿದ್ಯಾರ್ಥಿಗಳ ಪೋಷಕರೊಂದಿಗೆ ಮಾತನಾಡಲಾಗುವುದು, ಒಂದು ವೇಳೆ ಒಪ್ಪದಿದ್ದರೇ ಆನ್ ಲೈನ್ ತರಗತಿಗೆ ಅವಕಾಶವಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!