ಬೆಳ್ತಂಗಡಿ: ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಇಬ್ಬರು ಮೃತ್ಯು
ಬೆಳ್ತಂಗಡಿ: ಮದ್ದಡ್ಡದ ಕಿನ್ನಿಗೊಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿವೇಳೆ ಬೈಕ್ ಮತ್ತು ಲಾರಿ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರ ಪೈಕಿ ಒಬ್ಬರು ಗುರುವಾಯನಕೆರೆಯವರಾದರೆ ಮತ್ತೊರ್ವರು ನಾವೂರದವರು ಎಂದು ತಿಳಿದು ಬಂದಿದೆ..
ಮೃತರನ್ನು ನಾವೂರಿನ ನಿವಾಸಿ ಹಮೀದ್ ಕುದುರು ಅವರ ಪುತ್ರ ನಿಸ್ಬ(19) ಎಂದು ತಿಳಿದುಬಂದಿದೆ. ಮತ್ತೋರ್ವ ಯುವಕ ಕುವೆಟ್ಟು ಗ್ರಾಮದ ಗುರುವಾಯನಕೆರೆ ನಿವಾಸಿ ಅಶ್ರಫ್ ಅವರ ಪುತ್ರ ಅಶ್ಪಾಕ್(19) ಎಂದು ಗುರುತಿಸಲಾಗಿದೆ.





