October 22, 2024

ಗಣ ರಾಜ್ಯೋತ್ಸವದ ಪರೇಡ್ ನಲ್ಲಿ ಶ್ರೀ ನಾರಾಯಣ ಗುರು ಸ್ಮರಣೆಯ ಸ್ಥಬ್ದಚಿತ್ರಕ್ಕೆ (ಟ್ಯಾಬ್ಲೋ) ಕೇಂದ್ರದ ನಿರಾಕರಣೆ: ವೆಲ್ಫೇರ್ ಪಕ್ಷ ಖಂಡನೆ

0

ಮಂಗಳೂರು: ಗಣ ರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ನಡೆಯುವ ಪರೇಡ್ ನಲ್ಲಿ ಆಯಾ ರಾಜ್ಯಗಳ ಸಂಸ್ಕೃತಿ, ಸಮಾಜ ಸುಧಾರಕರಾಗಿರುವ ಶ್ರೇಷ್ಠ ವ್ಯಕ್ತಿತ್ವ ಅಥವಾ ಭವ್ಯ ಪರಂಪರೆಗಳನ್ನು ಬಿಂಬಿಸುವ ಪ್ರತೀಕಗಳ ಸ್ಥಬ್ಧಚಿತ್ರಗಳು, ಪಾಲ್ಗೊಂಡು ದೇಶದ ಐತಿಹಾಸಿಕ ಚಿತ್ರಣವನ್ನು ನೀಡುವ ಮೆರವಣಿಗೆಗೆ ಮೆರುಗು ನೀಡುವುದು ನಮ್ಮ ದೇಶದಲ್ಲಿ ಇದುವರೆಗೆ ನಡೆದುಕೊಂಡು ಬಂದ ರೂಢಿ.

ಅದರಂತೆ ಕೇರಳ ಸರಕಾರ ಈ ಬಾರಿಯ ಪರೇಡ್ ನಲ್ಲಿ ಭಾಗವಹಿಸಲು ಸಹಜವಾಗಿಯೇ ಅಲ್ಲಿನ ನಿವಾಸಿಯಾಗಿದ್ದ, ದೇಶಾದ್ಯಂತವಿರುವರಾದ ಎಲ್ಲಾ ಹಿಂದುಳಿದ ವರ್ಗಗಳ ಆಶಾಕಿರಣವಾದ, ಮಾನವೀಯತೆಯ ಹರಿಕಾರ ಶ್ರೀ ನಾರಾಯಣ ಗುರುರವರ ಟ್ಯಾಬ್ಲೋ ಪ್ರದರ್ಶನಕ್ಕಾಗಿ ಕೇಂದ್ರ ಸರಕಾರಕ್ಕೆ ಅಪೇಕ್ಷೆ ಸಲ್ಲಿಸಿದ್ದು, ಆದರೆ ಈಗಿನ ಕೇಂದ್ರ ಸರಕಾರ ತನ್ನ ಸರ್ವಾಧಿಕಾರಿ ಧೋರಣೆಯಿಂದ ಅದಕ್ಕೆ ಅನುಮತಿ ನೀಡದೆ ಇರುವುದು ಅಕ್ಷಮ್ಯವಾಗಿದೆಯೆಂಬುವುದಾಗಿ ವೆಲ್ಫೇರ್ ಪಾರ್ಟಿ ಅಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವೃ ಕಳವಳ ವ್ಯಕ್ತಪಡಿಸಿದ್ದು ಇದು, ನಮ್ಮ ದೇಶದ ಸ್ವಾತಂತ್ರ್ಯ ಪೂರ್ವ ಇತಿಹಾಸದಲ್ಲಿ ಅನಾದಿ ಕಾಲದಿಂದಲೂ ನ್ಯಾಯ ನಿರಾಕರಿಸಲ್ಪಟ್ಟ, ತುಳಿಯಲ್ಪಟ್ಟ ಹಿಂದುಳಿದ ವರ್ಗ, ಸಮೂಹಗಳ ಮೇಲೆ ಮೇಲ್ಜಾತಿ ಸವರ್ಣೀಯ ಸ್ವಾರ್ಥ ಹಿತಾಸಕ್ತಿಗಳ ಹಿಡಿತವನ್ನು ಮತ್ತೆ ನೆನಪಿಗೆ ತರುವಂತಿದೆ ಮತ್ತು ಇದನ್ನು ದೇಶದ ಸಂವಿಧಾನವನ್ನು ಗೌರವಿಸುವ ಜಾತ್ಯತೀತ ನಿಲುವಿಗೆ ಬದ್ದವಾಗಿರುವ ಎಲ್ಲಾ ರಾಜಕೀಯ ಪಕ್ಷಗಳು ಕೂಡಾ ಒಕ್ಕೊರಲಿನಿಂದ ಎದುರಿಸಬೇಕಾಗಿದೆಯೆಂದ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಅಡ್ವೋಕೇಟ್ ಶ್ರೀ ಸರ್ಪರಾಜ್ ರವರು ಕೇಂದ್ರ ಸರ್ಕಾರವು, ದೇಶದ ಬಹುತೇಕ ಹಿಂದುಳಿದ ವರ್ಗಗಳ ಅಜೇಯ ಪುರುಷರೊಬ್ಬರಿಗೆ ಮಾಡಿದ ಅವಮರ್ಯಾದೆಯನ್ನು ನಮ್ಮ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಮಾತ್ರವಲ್ಲದೆ ಸರಕಾರವು ಸದ್ರಿ ಸಮುದಾಯ ಭಾಂಧವರ ಕ್ಷಮೆಯಾಚಿಸಿ, ಗಣ ರಾಜ್ಯೋತ್ಸವದ ಪರೇಡ್ ನಲ್ಲಿ ಕೇರಳ ಸರಕಾರವು ಕೋರಿರುವಂತೆ ಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರಗಳ ಪ್ರದರ್ಶನಕ್ಕೆ ಬೇಷರತ್ ಅನುವು ಮಾಡಿಕೊಡಬೇಕಾಗಿ ಆಗ್ರಹಿಸುತ್ತದೆ ಎಂಬುವುದನ್ನು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.

Leave a Reply

Your email address will not be published. Required fields are marked *

error: Content is protected !!