February 4, 2026

ವಿಟ್ಲ: ಕೊಳ್ನಾಡು ಗ್ರಾಮದಲ್ಲಿ ಸರ್ಕಾರಿ ಸ್ಥಳವನ್ನು ಸ್ವಾಧೀನಪಡಿಸಿ, ಮನೆ ನಿರ್ಮಾಣ: ವಿವಿಧ ಇಲಾಖೆಗೆ ದೂರು

0
IMG-20220113-WA0013.jpg

ವಿಟ್ಲ: ಅಕ್ರಮವಾಗಿ ಸರ್ಕಾರಿ ಸ್ಥಳವನ್ನು ಸ್ವಾಧೀನ ಪಡಿಸಿಕೊಂಡು,ಮನೆ ನಿರ್ಮಿಸುತ್ತಿರುವ ಬಗ್ಗೆ ವಿವಿಧ ಇಲಾಖೆಗಳಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ.

ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿನ 06.23 ಎಕ್ರೆ ವಿಸ್ತೀರ್ಣದಲ್ಲಿ ಸರ್ಕಾರಿ ಜಮೀನು ಇದ್ದು.ಸದ್ರಿ ಜಮೀನಿನನ್ನು ಕೊಳ್ನಾಡು ಗ್ರಾಮದ ಸಾಲೆತ್ತೂರು ಕಟ್ಟೆ ನಿವಾಸಿ ಅಬ್ದುಲ್ ಲತೀಪ್ ಎಂಬವರು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡು,ಯಾವುದೇ ದಾಖಲೆಯಿಲ್ಲದೇ,ಗ್ರಾಮ ಪಂಚಾಯತ್ ನಿಂದ ಅನುಮತಿಯನ್ನು ಪಡೆಯದೇ ಅನಧಿಕೃತವಾಗಿ ಮನೆಯನ್ನು ನಿರ್ಮಿಸುತ್ತಿದ್ದು. ಈ ಬಗ್ಗೆ ಗ್ರಾಮ ಪಂಚಾಯತಿಗೆ ಹಲವು ಬಾರಿ ಮೌಖಿಕವಾಗಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ
ಎಚ್ ಎಂ ಖಾಲೀದ್ ಕೊಳ್ನಾಡು ಅವರು ಜಿಲ್ಲಾಧಿಕಾರಿ, ತಹಶಿಲ್ದಾರ್, ಕಂದಾಯ ಮೊದಲಾದ ಇಲಾಖೆಗೆ
ದೂರು ಸಲ್ಲಿಸಿದ್ದಾರೆ.

ಮಾತ್ರವಲ್ಲದೆ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಸರ್ಕಾರಿ ಜಮೀನನ್ನು ಸಕ್ರಮ ಗೊಳಿಸುವ ಸಲುವಾಗಿ ನಮೂನೆ 94C ಯಡಿ ಯಲ್ಲಿ ಅರ್ಜಿ ಸಲ್ಲಿಸಿರೋದು ಗಮನಕ್ಕೆ ಬಂದಿದ್ದು, ಅದ್ದರಿಂದ ನಿರ್ಮಾಣ ಹಂತದಲ್ಲಿರುವ ಅಕ್ರಮ ಮನೆಗೆ ಈ ಕೂಡಲೇ ತಡೆ ನೀಡುವಂತೆ ಹಾಗೂ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡ ಸರ್ಕಾರಿ ಸ್ಥಳವನ್ನು ಸರ್ಕಾರವೇ ಮರು ವಶಪಡಿಸಿಕೊಳ್ಳುವಂತೆ ಹಾಗೂ ಅಕ್ರಮ ಸ್ವಾಧೀನಗಾರ ನಮೂನೆ 94 C ಯಡಿ ಯಲ್ಲಿ ಸಕ್ರಮಕ್ಕೆ ಸಲ್ಲಿಸಿರುವ ಅರ್ಜಿಯನ್ನು ಯಾವುದೇ ಕಾರಣಕ್ಕೂ ಮಂಜೂರಾತಿಗೊಳಿಸದಂತೆ,ಸದ್ರಿ ನಿರ್ಮಾಣ ಹಂತದಲ್ಲಿರುವ ಮನೆಗೆ ಗ್ರಾಮ ಪಂಚಾಯತಿನಿಂದ ಯಾವುದೇ ಕದ ಸಂಖ್ಯೆ ನೀಡದಂತೆ ಹಾಗೂ ವಿದ್ಯುತ್ ನಿರಪೇಕ್ಷಣ ಪತ್ರ ನೀಡಬಾರದು ಅವರು ಮನವಿಯಲ್ಲಿ ತಿಳಿಸಿದ್ದಾರೆ.‌

Leave a Reply

Your email address will not be published. Required fields are marked *

error: Content is protected !!