November 22, 2024

ನಾನು ಬಿಜೆಪಿ ಸಂಸದ, ನನ್ನ ಮೇಲೆ ಇ.ಡಿ ದಾಳಿ ನಡೆಸದು: ಬಿಜೆಪಿ ಸಂಸದ ಸಂಜಯ್ ಪಾಟೀಲ್

0

ಮುಂಬೈ: ‘ನಾನು ಬಿಜೆಪಿ ಸಂಸದ. ಹೀಗಾಗಿ ನನ್ನ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸದು’ ಎಂದು ಮಹಾರಾಷ್ಟ್ರದ ಸಾಂಗ್ಲಿ ಕ್ಷೇತ್ರದ ಬಿಜೆಪಿ ಸಂಸದ ಸಂಜಯ್ ಪಾಟೀಲ್ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಸಂಸದನಾದ್ದರಿಂದ ಇ.ಡಿ ನನ್ನ ಬಳಿ ಬಾರದು. ₹40 ಲಕ್ಷ ಮೌಲ್ಯದ ಐಷಾರಾಮಿ ಕಾರು ಖರೀದಿಸುವುದಕ್ಕಾಗಿ ಸಾಲ ತೆಗೆದುಕೊಳ್ಳಬೇಕಿದೆ. ನಮ್ಮ ಸಾಲದ ಮೊತ್ತ ನೋಡಿದರೆ ಇ.ಡಿಗೆ ಆಶ್ಚರ್ಯವಾಗಲಿದೆ ಎಂದು ಹೇಳಿದ್ದಾರೆ.

‘ಕೇಸರಿ ಪಕ್ಷದವರ ಮೇಲೆ ಯಾವುದೇ ತನಿಖೆ ಇರುವುದಿಲ್ಲ. ಹಾಗಾಗಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇನೆ’ ಎಂದು ಬಿಜೆಪಿ ನಾಯಕ ಹರ್ಷವರ್ಧನ್ ಪಾಟೀಲ್ ಇತ್ತೀಚೆಗೆ ಹೇಳಿದ್ದರು. ಪ್ರತಿಪಕ್ಷಗಳನ್ನು ಗುರಿಯಾಗಿಸಲು ಕೇಂದ್ರ ಸರ್ಕಾರವು ಸಿಬಿಐ, ಇ.ಡಿ ಹಾಗೂ ಎನ್‌ಸಿಬಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಇತ್ತೀಚೆಗೆ ಆರೋಪಿಸಿದರು. ಅದೇ ದಿನ ಹರ್ಷವರ್ಧನ್ ಪಾಟೀಲ್ ಕೂಡ ಹೇಳಿಕೆ ನೀಡಿದ್ದರು.

ಪುಣೆ ಜಿಲ್ಲೆಯ ಇಂದಾಪುರ್ ಕಾಂಗ್ರೆಸ್ ಶಾಸಕರಾಗಿದ್ದ ಹರ್ಷವರ್ಧನ್ ಪಾಟೀಲ್, 2019ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದರು.

Leave a Reply

Your email address will not be published. Required fields are marked *

error: Content is protected !!