March 23, 2026

ಕಬಕ: ರೈಲ್ವೆ ರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ ವೃದ್ಧ:
ಹೆಗಲ ಮೇಲೆ ಹೊತ್ತು ತಂದು ಆಸ್ಪತ್ರೆ ಸಾಗಿಸಿದ ಅರ್ಷದ್ ಕಬಕ

0
IMG-20220108-WA0038.jpg

ಪುತ್ತೂರು: ತಡ ರಾತ್ರಿ ರೈಲ್ವೆ ಹಳಿ ಮೂಲಕ ಕಬಕ – ಕೆದುವಡ್ಕ ಕಾಲು ರಸ್ತೆಯಲ್ಲಿ ಅಲ್ಪ ಮಾನಸಿಕ ಅನಾರೋಗ್ಯ ಹೊಂದಿದ ಜನರ ಬಾಯಲ್ಲಿ SI ಭಟ್ ಎಂದೇ ಚಿರಪರಿಚಿತ ಸಬ್ಬಣ ಕೋಡಿ ಈಶ್ವರ ಭಟ್ ಬಿದ್ದು ಗಾಯಗೊಂಡು ರೈಲ್ವೆ ರಸ್ತೆ ಪಕ್ಕ ಬಿದ್ದಿದ್ದರು. ಇದನ್ನು ಕಂಡ ಸ್ಥಳೀಯರೊಬ್ಬರು ಕೆ.ಎಸ್. ಅರ್ಷದ್ ರ ಗಮನಕ್ಕೆ ತಂದಾಗ ತಕ್ಷಣ ಸ್ಪಂದಿಸಿ ಹತ್ತಿರದ ಅಂಗಡಿ ಮಾಲಕ ಜಯರಾಮ್ ಹಾಗೂ ಅಯ್ಯಪ್ಪ ಮಾಲಾದಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಕಾಲು ದಾರಿಯಲ್ಲಿ ಸುಮಾರು ಅರ್ಧ ಕಿ.ಮೀ ವರೇಗೆ ತನ್ನ ಭುಜದ ಸಹಾಯ ದಿಂದ ಈಶ್ವರ ಭಟ್ ರನ್ನು ಮಲಗಿಸಿ ಕಬಕ ಪೇಟೆಯ ವರೇಗೆ ತಂದು ಆಸ್ಪತ್ರೆ ತಲುಪಿಸಲು ನೆರವಾಗಿದ್ದಾರೆ.

ಇವರ ಈ ಮಾನವೀಯತೆಯ ಕಾರ್ಯವನ್ನು ಸ್ಥಳೀಯ ಸರ್ವ ಧರ್ಮಗಳ ಜನರು ಕೊಂಡಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!