ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ: ದ.ಕ ಜಿಲ್ಲೆಯಲ್ಲಿ ಮಿತಿಮೀರುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಪೈಕಿ ಓಮಿಕ್ರಾನ್ ಪ್ರಕರಣಗಳೇ ಹೆಚ್ಚು ಅನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 75 ಮಂದಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ದಿನಕ್ಕೆ ಸರಾಸರಿ ಆರು ಸಾವಿರ ಮಂದಿಯ ಟೆಸ್ಟಿಂಗ್ ಆಗುತ್ತಿದೆ. ಒಂದು ದಿನದ ಅಂತರದಲ್ಲಿ ಆರೂವರೆ ಸಾವಿರ ಮಂದಿಗೆ ಹೆಚ್ಚುವರಿಯಾಗಿ ಟೆಸ್ಟಿಂಗ್ ಆಗಿದ್ದು, ಈ ಪೈಕಿ 75 ಮಂದಿ ಪಾಸಿಟಿವ್ ಆಗಿದ್ದಾರೆ.
ಸೋಮವಾರದ ವರದಿಯಲ್ಲಿ 52 ಮಂದಿ ಪಾಸಿಟಿವ್ ಆಗಿದ್ದರು. ಸರಾಸರಿ 5 ಸಾವಿರ ಮಂದಿಯ ಟೆಸ್ಟಿಂಗ್ ಆಗಿತ್ತು. ಪಾಸಿಟಿವ್ ಕಂಡುಬಂದ ಶಾಲೆ, ಹಾಸ್ಟೆಲ್ ಗಳನ್ನು ಗುರಿಯಾಗಿಸಿ ಅಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಆದರೆ ಈಗ ಪಾಸಿಟಿವ್ ಆಗುತ್ತಿರುವ ಹೆಚ್ಚಿನ ಮಂದಿ ಓಮಿಕ್ರಾನ್ ಸೋಂಕಿತರೇ ಆಗಿದ್ದಾರೆ ಅನ್ನುವ ಮಾಹಿತಿಗಳಿವೆ. ಈ ಬಗ್ಗೆ ಜಿಲ್ಲಾಡಳಿತದಿಂದ ಪ್ರತಿ ದಿನವೂ ಪಾಸಿಟಿವ್ ಆದವರನ್ನು ಜಿನೋಮ್ ಸೀಕ್ವೆನ್ಸ್ ಟೆಸ್ಟ್ ಮಾಡಲಾಗುತ್ತಿದೆ. ಇದರ ವರದಿಯನ್ನು ಜಿಲ್ಲಾಡಳಿತ ಬಹಿರಂಗ ಪಡಿಸುತ್ತಿಲ್ಲ. ಹೆಚ್ಚಿನವರು ಓಮಿಕ್ರಾನ್ ಪಾಸಿಟಿವ್ ಆಗುತ್ತಿದ್ದಾರೆ ಅನ್ನುವ ಮಾಹಿತಿ ಆರೋಗ್ಯ ಇಲಾಖೆಯಿಂದ ತಿಳಿದುಬಂದಿದೆ. ಶೀತ, ನೆಗಡಿ ಪ್ರಕರಣಗಳಲ್ಲಿ ಹೆಚ್ಚಿನ ಮಂದಿ ಪರೀಕ್ಷೆಗೆ ಒಳಪಡುತ್ತಿಲ್ಲ. ಇಂಥವರು ಕೂಡ ಕೊರೊನಾ ಪಾಸಿಟಿವ್ ಆಗುವ ಸಾಧ್ಯತೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ರಾಜ್ಯದಲ್ಲಿ ಮಂಗಳವಾರದ ವರದಿಯಲ್ಲಿ 2400ಕ್ಕೂ ಹೆಚ್ಚು ಮಂದಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ಹೀಗಾಗಿ ಸೋಂಕು ಹರಡುವುದನ್ನು ತಪ್ಪಿಸಲು ಲಾಕ್ಡೌನ್ ಮಾದರಿಯ ನಿರ್ಬಂಧ ಹೇರಲು ರಾಜ್ಯ ಸರಕಾರ ಮುಂದಾಗಿದೆ. ಓಮಿಕ್ರಾನ್ ಸೋಂಕು ವೇಗವಾಗಿ ಹರಡುವುದರಿಂದ ಕೊರೊನಾ ಮತ್ತೆ ಹೆಚ್ಚುತ್ತಿದೆ ಎನ್ನಲಾಗುತ್ತಿದೆ.
ಬೆಂಗಳೂರು: ರಾಜ್ಯದಲ್ಲಿ ಓಮೈಕ್ರಾನ್ ಹಿನ್ನೆಲೆಯಲ್ಲಿ ಸರಕಾರ ಹೊಸ ಮಾರ್ಗಸೂಚಿ ಹೊರಡಿಸಿದೆ.
ಹೊಸ ಮಾರ್ಗಸೂಚಿಯಲ್ಲಿ ಏನಿದೆ?
ಬೆಂಗಳೂರಿಗೆ ಪ್ರತ್ಯೇಕ, ರಾಜ್ಯಕ್ಕೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ . ನಾಳೆ 10 ಗಂಟೆಯಿಂದ ನಿಯಮಗಳು ಜಾರಿ ಆಗಲಿದೆ.
ಮುಂದಿನ ಎರಡು ವಾರ ಶಾಲೆಗಳು ಕ್ಲೋಸ್.. ಬೆಂಗಳೂರಿನಲ್ಲಿ 10 ಮತ್ತು 12 ತರಗತಿ ಮಾತ್ರ ಓಪನ್..
ರಾಜ್ಯದಲ್ಲಿ ಮುಂದಿನ ಎರಡು ವಾರ ಅಂದರೇ ಜನವರಿ 6ರ ಶುಕ್ರವಾರ ಸಂಜೆಯಿಂದ ವೀಕೆಂಡ್ ಕರ್ಫ್ಯೂ ಜಾರಿ ಆಗಲಿದೆ.. ಎರಡು ವಾರ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಜಾರಿ ಆಗಲಿದೆ.
ಚಿತ್ರ ಮಂದಿರ, ಬಾರ್, ಮಾಲ್, ಪಬ್ಗಳಲ್ಲಿ 50:50 ಜನರಿಗೆ ಅಷ್ಟೇ ಅವಕಾಶ..
ಮದುವೆ ಕಾರ್ಯಕ್ರಮದಲ್ಲಿ ಹೊರಾಂಗಣದಲ್ಲಿ 200 ಜನರಿಗೆ, ಒಳಾಂಗಣದಲ್ಲಿ 100 ಜನರಿಗೆ ಮಾತ್ರ ಅವಕಾಶ
ಬಸ್, ಮೆಟ್ರೋದಲ್ಲಿ ನಿಂತು ಪ್ರಯಾಣ ಮಾಡುವಂತಿಲ್ಲ.. ಬಿಎಂಟಿಸಿ, ಮೆಟ್ರೋ ಪ್ರತ್ಯೇಕ ಮಾರ್ಗಸೂಚಿ ನೀಡುತ್ತೇವೆ.
ರಾಜ್ಯದಲ್ಲಿ ಪ್ರತಿಭಟನೆ ಹಾಗೂ ಜಾತ್ರೆ, ಮೆರವಣಿಗೆ, ಜನಜಂಗುಳಿ ಮಾಡುವಂತಿಲ್ಲ..
ಪ್ರಾರ್ಥನೆ ವೇಳೆ ಶೇ.50 ಜನರಿಗಿಂತ ಹೆಚ್ಚು ಮಂದಿ ಸೇರುವಂತಿಲ್ಲ.
ಹೊರ ರಾಜ್ಯ, ವಿದೇಶಿ ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯ.. ಪ್ರಯಾಣಿಕರ ಟ್ರ್ಯಾಕಿಂಗ್, ಟ್ರೆಸಿಂಗ್ ಮಾಡಲಾಗುತ್ತದೆ.
ಗೋವಾದಲ್ಲಿ ಹೊಸ ವರ್ಷ ಆಚರಿಸಿ ಬಂದವರು ಪಾಸಿಟಿವ್ ಆಗಿದ್ದಾರೆ. ಕ್ರಮಗಳು ತೆಗೆದುಕೊಂಡಿರುವ ಕಾರಣ ಆತಂಕಕ್ಕೊಳಗಾಗಬಾರದು.
ಮೊದಲು, ಎರಡನೇ ಅಲೆ ಹೋಲಿಕೆ ಮಾಡಿದ್ರೆ, ಮೂರನೇ ಅಲೆ ಬಲವಾಗಿಲ್ಲ.
ಅತಿ ಹೆಚ್ಚು ಸೋಂಕಿತರು ಬಂದರೇ ಆಸ್ಪತ್ರೆಗಳ ಮೇಲೆ ಒತ್ತಡ ಆಗಲಿದೆ.. ಆದ್ದರಿಂದಲೇ sರ್ಕಾರದ ಮುಂದಾಲೋಚನೆ ಮಾಡಿ ಸರ್ಕಾರ ತೀರ್ಮಾಣಗಳನ್ನು ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.





