November 3, 2026

ನಂದಿನಿ ಮೊಸರು ಪ್ರತಿ ಲೀಟರ್‌ಗೆ 2 ರೂ. ಇಳಿಸಲು ಸಿಎಂ ಸೂಚನೆ

b5b659dc-ac91-496e-83ba-6e8ddc1db603

ಬೆಂಗಳೂರು: ಹಾಲು – ಮೊಸರಿನ ದರ ಏರಿಕೆಗೆ ರಾಜ್ಯಾದ್ಯಂತ ಜಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸಿಎಂ ಡಿಕೆ ಶಿವಕುಮಾರ್‌ ನಂದಿನಿ ಮೊಸರಿನ ದರ ಪ್ರತಿ ಲೀಟರ್‌ಗೆ 2 ರೂ. ಕಡಿಮೆ ಮಾಡಲು ಸೂಚನೆ ಕೊಟ್ಟಿದ್ದಾರೆ.

ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ಅರ್ಧ ಲೀಟ‌ರ್ ಮೊಸರಿನ ದರವನ್ನ 28 ರೂ. ನಿಂದ 34 ರೂ.ಗೆ ಹಾಗೂ 1 ಲೀಟರ್ ಮೊಸರಿನ ದರವನ್ನ 54 ರೂ. ನಿಂದ 68 ರೂ.ಗೆ ಹೆಚ್ಚಿಸಲಾಗಿತ್ತು. ಇದರ ವಿರುದ್ಧ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮೊಸರಿನ ದರ 2 ರೂ. ಕಡಿಮೆ ಮಾಡಲು ಸೂಚನೆ ಕೊಟ್ಟಿದ್ದಾರೆ.

ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್‌ ಅವರು, ಇವತ್ತು ಕೆಎಂಎಫ್‌ ಹಾಗೂ ವಿವಿಧ ಜಿಲ್ಲಾ ಹಾಲು ಒಕ್ಕೂಟಗಳ ಪದಾಧಿಕಾರಿಗಳು ನನ್ನನ್ನು ಭೇಟಿಯಾಗಿ, ಹಾಲಿನ ದರ ಹೆಚ್ಚಳದ ನಿರ್ಧಾರಕ್ಕೆ ಧನ್ಯವಾದ ತಿಳಿಸಲು ಬಂದಿದ್ದರು. ಮೊಸರಿನ ಬೆಲೆಯನ್ನ 2 ರೂ. ಕಡಿಮೆ ಮಾಡಲು ಹೇಳುತ್ತೇನೆ. ಹಾಲಿನ ಬೆಲೆ ಪ್ಯಾಕ್‌ ಮೇಲೆ ನಿರ್ಧಾರ ಆಗುತ್ತೆ. ಈ ಬಗ್ಗೆ ಮಾಹಿತಿ ಅಧಿಕಾರಿಗಳು ಕೊಡ್ತಾರೆ ಎಂದು ತಿಳಿಸಿದ್ದಾರೆ.

error: Content is protected !!