November 3, 2026

ಬೈಕ್‌ಗೆ ಲಾರಿ ಢಿಕ್ಕಿ: ತಂದೆ, ಇಬ್ಬರು ಮಕ್ಕಳು ಸಾವು

4ca52ff4-8d17-4ae4-a9ef-ae00192d74a6

ಕೊಪ್ಪಳ: ಪತ್ನಿಯೊಂದಿಗೆ ಜಗಳವಾಡಿಕೊಂಡು ಮಕ್ಕಳಿಬ್ಬರೊಂದಿಗೆ ಊರಿಗೆ ತೆರಳುವಾಗ ಲಾರಿ ಡಿಕ್ಕಿಯಾಗಿ ತಂದೆ ಹಾಗೂ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮದ ಬಳಿ ನಡೆದಿದೆ.

ಗಂಗಾವತಿ ನಿವಾಸಿಯಾದ ಅಮರ್ ಚೌಸ್ (32), ಇವರ ಪುತ್ರ ಅಮನ್ (9) ಹಾಗೂ ಮಗಳು ಅಮಯ್ ಯಾರಾ (6) ಮೃತ ದುರ್ದೈವಿಗಳು. ಕುಟುಂಬ ಕಲಹ ಕಾರಣ ಅಮರ್ ಚೌಸ್ ಪತ್ನಿ ತವರು ಮನೆಯಾದ ಕೊಪ್ಪಳಕ್ಕೆ ಬಂದಿದ್ದರು. ಪತ್ನಿಯನ್ನು ಕರೆದೊಯ್ಯಲು ಗಂಗಾವತಿಯಿಂದ ಕೊಪ್ಪಳಕ್ಕೆ ಬಂದಿದ್ದ ಅಮರ್ ಚೌಸ್ ಪುನಃ ಪತ್ನಿಯೊಂದಿಗೆ ಜಗಳ ವಾಡಿಕೊಂಡಿದ್ದರು.

error: Content is protected !!